Home Uncategorized ಉಡುಪಿ ಕಾಲೇಜು ವಾಶ್‌ರೂಮ್‌ ವಿಡಿಯೋ ಪ್ರಕರಣ: ತ್ವರಿತವಾಗಿ ಎಫ್ಎಸ್ಎಲ್ ವರದಿ ಕೇಳಿದ ಪೊಲೀಸರು!

ಉಡುಪಿ ಕಾಲೇಜು ವಾಶ್‌ರೂಮ್‌ ವಿಡಿಯೋ ಪ್ರಕರಣ: ತ್ವರಿತವಾಗಿ ಎಫ್ಎಸ್ಎಲ್ ವರದಿ ಕೇಳಿದ ಪೊಲೀಸರು!

12
0

ಉಡುಪಿಯ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ವಯೋರಿಸಂ ಪ್ರಕರಣದ ತನಿಖೆ ಮುಂದುವರಿದಿದ್ದು, ಎಫ್‌ಎಸ್‌ಎಲ್ ತಜ್ಞರು ತಮ್ಮ ವರದಿಯನ್ನು ಸಲ್ಲಿಸಲು ಆಗಸ್ಟ್ 25ರವರೆಗೆ ಕಾಲಾವಕಾಶ ಕೋರಿದ್ದಾರೆ. ಉಡುಪಿ: ಉಡುಪಿಯ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ವಯೋರಿಸಂ ಪ್ರಕರಣದ ತನಿಖೆ ಮುಂದುವರಿದಿದ್ದು, ಎಫ್‌ಎಸ್‌ಎಲ್ ತಜ್ಞರು ತಮ್ಮ ವರದಿಯನ್ನು ಸಲ್ಲಿಸಲು ಆಗಸ್ಟ್ 25ರವರೆಗೆ ಕಾಲಾವಕಾಶ ಕೋರಿದ್ದಾರೆ. ಆದಾಗ್ಯೂ ಪೊಲೀಸರು ತ್ವರಿತವಾಗಿ ಎಫ್‌ಎಸ್‌ಎಲ್ ವರದಿ ನೀಡುವಂತೆ ಕೇಳಿದ್ದು, ತ್ವರಿತವಾಗಿ ವರದಿ ಸಿಕ್ಕರೆ ಇದು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಪ್ರಕರಣದ ಮೂವರು ಆರೋಪಿ ಹುಡುಗಿಯರು ಕಾಲೇಜಿನ ವಾಶ್‌ರೂಮ್‌ನೊಳಗೆ ತಮ್ಮ ಸಹಪಾಠಿಗಳ ವೀಡಿಯೊ ರೆಕಾರ್ಡ್ ಮಾಡುವ ಮೂಲಕ ತಮಾಷೆ ಮಾಡುವುದನ್ನು ಬಿಟ್ಟು ಬೇರೆ ಯಾವುದೇ ಉದ್ದೇಶವನ್ನು ಹೊಂದಿದ್ದಾರೆಯೇ ಎಂದು ಪೊಲೀಸರು ತಮ್ಮ ತನಿಖೆಯನ್ನು ಕೇಂದ್ರೀಕರಿಸಿದ್ದಾರೆ.

ಆರೋಪಿ ಹುಡುಗಿಯರು ಸಂಪರ್ಕದಲ್ಲಿದ್ದ ಇತರ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಪಾದಿತ ವೀಡಿಯೊವನ್ನು ಅಳಿಸುವ ಮೊದಲು ಬೇರೆ ಯಾವುದೇ ಫೋನ್‌ಗಳಿಗೆ ಕಳುಹಿಸಲಾಗಿದೆಯೇ ಎಂಬುದನ್ನು ಪತ್ತೆ ಮಾಡಬಹುದು. ಪೊಲೀಸರ ಬೇಡಿಕೆಗೆ ಸ್ಪಂದಿಸಿದ ಎಫ್‌ಎಸ್‌ಎಲ್ ತಜ್ಞರು ವರದಿಯನ್ನು ಮೊದಲೇ ಕಳುಹಿಸಬಹುದು. ಆದರೆ ಇದು ಒಂದು ವಾರಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬಾಲಕಿಯ ಫೋಟೊ ತಿರುಚಿ, ಅಶ್ಲೀಲ ವಿಡಿಯೋದಲ್ಲಿ ಬಳಕೆ; ಸ್ನ್ಯಾಪ್‌ಚಾಟ್‌ನಲ್ಲಿ ಹರಿಬಿಟ್ಟವರ ವಿರುದ್ಧ ದೂರು

ಇದೇ ವೇಳೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಯೋರಿಸಂ ನಡೆದಿದೆ ಎನ್ನಲಾದ ಪ್ಯಾರಾಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಅಬ್ದುಲ್ ಖಾದರ್ ಮೂವರು ಆರೋಪಿಗಳ ವಿರುದ್ಧ ಧ್ವನಿ ಎತ್ತಿದ್ದ ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕಿದ್ದಾರೆ. ಮೂವರು ಆರೋಪಿ ಬಾಲಕಿಯರ ತಂದೆ ನಿಷೇಧಿತ ಪಿಎಫ್‌ಐ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಅವರು ಹೇಳಿದರು. ಈ ವಿಷಯವನ್ನು ಉಡುಪಿ ಎಸ್ಪಿ ಅವರ ಗಮನಕ್ಕೆ ತರಲಾಗಿದ್ದು, ಈ ಕೋನದಿಂದಲೂ ಪ್ರಕರಣದ ತನಿಖೆ ನಡೆಸುವಂತೆ ಎಸ್ಪಿಗೆ ಒತ್ತಾಯಿಸಲಾಗಿದೆ. ಪ್ಯಾರಾಮೆಡಿಕಲ್ ಕಾಲೇಜು ಬಳಿ ಮುಸ್ಲಿಂ ಹುಡುಗರು ರೆಕ್ಕಿ ಮಾಡುತ್ತಿದ್ದರು. ಆದ್ದರಿಂದ ಪೊಲೀಸರು ಕಾಲೇಜು ಆವರಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಬೇಕು ಎಂದು ಶಾಸಕರು ಹೇಳಿದರು.

ಈ ಸಂಬಂಧ ಆಗಸ್ಟ್ 4ರಂದು ಉಡುಪಿ ಜಿಲ್ಲೆಯ ಬಿಜೆಪಿಯ ಐವರು ಶಾಸಕರು ರಾಜ್ಯಪಾಲರನ್ನು ಭೇಟಿ ಈ ಪ್ರಕರಣದ ಎಸ್‌ಐಟಿ ತನಿಖೆಗೆ ಒತ್ತಾಯಿಸಲಿದ್ದಾರೆ ಎಂದು ಯಶಪಾಲ್ ಸುವರ್ಣ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here