Home Uncategorized ಉಡುಪಿ: ಕಾಲೇಜ್ ವಿದ್ಯಾರ್ಥಿನಿಯ ವಿಡಿಯೊ ಚಿತ್ರೀಕರಣ, ರಾಜಕೀಯಗೊಳಿಸಬೇಡಿ, ಎಲ್ಲಾ ಆಯಾಮಗಳಲ್ಲಿ ತನಿಖೆ-  ಖುಷ್ಬೂ ಸುಂದರ್

ಉಡುಪಿ: ಕಾಲೇಜ್ ವಿದ್ಯಾರ್ಥಿನಿಯ ವಿಡಿಯೊ ಚಿತ್ರೀಕರಣ, ರಾಜಕೀಯಗೊಳಿಸಬೇಡಿ, ಎಲ್ಲಾ ಆಯಾಮಗಳಲ್ಲಿ ತನಿಖೆ-  ಖುಷ್ಬೂ ಸುಂದರ್

10
0

ದೇಶಾದ್ಯಂತ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿರುವ ಉಡುಪಿ ಕಾಲೇಜಿನ ವಿದ್ಯಾರ್ಥಿನಿಯ ಶೌಚಾಲಯ ವಿಡಿಯೊ ಚಿತ್ರೀಕರಣ ಕುರಿತ ತನಿಖೆಗಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಇಂದು ಬೆಳಗ್ಗೆ ಕಾಲೇಜಿಗೆ ಭೇಟಿ ನೀಡಿದರು.  ಉಡುಪಿ: ದೇಶಾದ್ಯಂತ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿರುವ ಉಡುಪಿ ಕಾಲೇಜಿನ ವಿದ್ಯಾರ್ಥಿನಿಯ ಶೌಚಾಲಯ ವಿಡಿಯೊ ಚಿತ್ರೀಕರಣ ಕುರಿತ ತನಿಖೆಗಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಇಂದು ಬೆಳಗ್ಗೆ ಕಾಲೇಜಿಗೆ ಭೇಟಿ ನೀಡಿದರು. 

ಇದಕ್ಕೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆಯಾಗಬೇಕಾಗಿದೆ. ಕಾನೂನೂ ತನ್ನ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಯಾರು ಒತ್ತಡ ಹೇರಬಾರದು. ಸಂತ್ರಸ್ತೆ ಮತ್ತು ಆರೋಪಿ ಇಬ್ಬರನ್ನೂ ಭೇಟಿ ಮಾಡುವುದಾಗಿ ಅವರು ಹೇಳಿದ್ದಾರೆ.#WATCH | Udupi Video Incident | NCW (National Commission for Women) member Khushbu Sundar arrives at the college in Udupi, Karnataka to conduct an inquiry into the matter. pic.twitter.com/tHzwTjBmgE— ANI (@ANI) July 27, 2023

ಈ ವಿಚಾರದಲ್ಲಿ ರಾಜಕೀಯ ಬಣ್ಣ ಕುರಿತು ಪ್ರತಿಕ್ರಿಯಿಸಿದ ಖುಷ್ಬೂ ಸುಂದರ್,  ಸಂತ್ರಸ್ತೆ ಹಾಗೂ ಆಕೆಯ ಕುಟುಂಬವನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ರಾಜಕೀಯ ಪಕ್ಷಗಳು ಇದರಲ್ಲಿ ಹಸ್ತಕ್ಷೇಪ ಮಾಡಬಾರದು. ತಾನೂ ಯಾವುದೇ ರಾಜಕೀಯ ಪಕ್ಷವೊಂದರ ಪರವಾಗಿ ಬಂದಿಲ್ಲ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಆಗಮಿಸಿದ್ದು, ತನಿಖೆಯ ನಂತರ ಸತ್ಯಾಂಶ ಹೊರಬರಲಿದೆ ಎಂದರು. 
 

LEAVE A REPLY

Please enter your comment!
Please enter your name here