Home ಕರ್ನಾಟಕ ಉಡುಪಿ ಜಿಲ್ಲಾ ವಕ್ಫ್ ಸಂಸ್ಥೆಗಳಿಗೆ ಸೂಚನೆ

ಉಡುಪಿ ಜಿಲ್ಲಾ ವಕ್ಫ್ ಸಂಸ್ಥೆಗಳಿಗೆ ಸೂಚನೆ

44
0

ಉಡುಪಿ, ಜೂ.1: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿ ಯಾದ ಉಡುಪಿ ಜಿಲ್ಲೆಯ ಎಲ್ಲ ವಕ್ಫ್ ಸಂಸ್ಥೆಗಳು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯವು ಎ.23ರಂದು ನೀಡಿರುವ ಆದೇಶದಂತೆ ರಾಜ್ಯ ವಕ್ಫ್ ಮಂಡಳಿಯ ಮಾದರಿ ನಿಯಮಾವಳಿಯ ನಮೂನೆ ನಂ-42 ಕಡ್ಡಾಯ ವಾಗಿದೆ.

ಈವರೆಗೆ ನಿಯಮಾವಳಿಯನ್ನು ಅನುಮೋದನೆ ಮಾಡಿಸಿಕೊಳ್ಳದ ವಕ್ಫ್ ಸಂಸ್ಥೆಗಳು ಮಾದರಿ ನಿಯಮಾವಳಿಯ ನಮೂನೆ ನಂ.42(ಬೈಲಾ)ನ್ನು ಸಂಬಂಧ ಪಟ್ಟ ದಾಖಲೆಯೊಂದಿಗೆ ಜಿಲ್ಲಾ ವಕ್ಫ್ ಕಚೇರಿ ಮೂಲಕ ರಾಜ್ಯ ವಕ್ಫ್ ಮಂಡಳಿಯ ಅನುಮೋದನೆಗಾಗಿ ಅತೀ ಶೀಘ್ರ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2575803ನ್ನು ಸಂಪರ್ಕಿಸ ಬಹುದು ಎಂದು ಉಡುಪಿ ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here