ಉಡುಪಿ ಜಿಲ್ಲೆಯ ಮಲ್ಪೆ ಕಡಲತೀರದಲ್ಲಿ ಶನಿವಾರ ರಾತ್ರಿ ಪ್ರಬಲ ಅಲೆಗಳಿಗೆ ಕೊಚ್ಚಿಹೋಗಿ ಮಡಿಕೇರಿ ಮೂಲದ 16 ವರ್ಷದ ಬಾಲಕಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಂಗಳೂರು: ಉಡುಪಿ ಜಿಲ್ಲೆಯ ಮಲ್ಪೆ ಕಡಲತೀರದಲ್ಲಿ ಶನಿವಾರ ರಾತ್ರಿ ಪ್ರಬಲ ಅಲೆಗಳಿಗೆ ಕೊಚ್ಚಿಹೋಗಿ ಮಡಿಕೇರಿ ಮೂಲದ 16 ವರ್ಷದ ಬಾಲಕಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತಳನ್ನು ಮಾನ್ಯ ಎಂದು ಗುರುತಿಸಲಾಗಿದೆ. ಮಡಿಕೇರಿಯಿಂದ ತನ್ನ ಸ್ನೇಹಿತೆ ಯಶಸ್ವಿನಿ (16) ಜತೆ ಬೀಚ್‌ಗೆ ಬಂದಿದ್ದಳು.
ಪ್ರಬಲ ಅಲೆಗಳಿಗೆ ಸಿಲುಕಿ ಇಬ್ಬರು ಬಾಲಕಿಯರು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಮಲ್ಪೆಯ ಜೀವರಕ್ಷಕ ತಂಡ ದೌಡಾಯಿಸಿ ಅವರನ್ನು ರಕ್ಷಿಸಿ ದಡಕ್ಕೆ ಕರೆತರಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮಾನ್ಯ ಮೃತಪಟ್ಟಿದ್ದು, ಆಕೆಯ ಸ್ನೇಹಿತೆ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ; ಗದ್ದೆಯಲ್ಲಿ ತುಂಬಿಕೊಂಡಿದ್ದ ನೀರಿನಲ್ಲಿ ಮುಳುಗಿ ಇಬ್ಬರು ಸಾವು
ಮೂರು ದಿನಗಳ ಹಿಂದೆ ಇಬ್ಬರು ಹುಡುಗಿಯರು ತಮ್ಮ ಮನೆಗಳನ್ನು ತೊರೆದು ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಕಾಲ ಕಳೆದಿದ್ದರು. ಬಳಿಕ ಶನಿವಾರ ಸಂಜೆ ಮಲ್ಪೆ ತಲುಪಿದ್ದರು ಎಂದು ಮೂಲಗಳು ತಿಳಿಸಿವೆ.