Home Uncategorized ಉಡುಪಿ: ವೃದ್ಧರಿಗೆ 61 ಲಕ್ಷ ರೂ. ಆನ್‌ಲೈನ್ ವಂಚನೆ

ಉಡುಪಿ: ವೃದ್ಧರಿಗೆ 61 ಲಕ್ಷ ರೂ. ಆನ್‌ಲೈನ್ ವಂಚನೆ

26
0

ಉಡುಪಿ, ಜ.12: ಟ್ರೆಡಿಂಗ್‌ನಿಂದ ಹೆಚ್ಚಿನ ಲಾಭಾಂಶ ಪಡೆಯುವ ಆಸೆಯಿಂದ ಅಪರಿಚಿತರು ಕಳುಹಿಸಿದ ಲಿಂಕ್ ಮೂಲಕ ವ್ಯವಹರಿಸಿದ ವ್ಯಕ್ತಿಯೊಬ್ಬರು 61,90,000ರೂ. ಹಣವನ್ನು ಕಳೆದುಕೊಂಡಿದ್ದಾರೆ.

ಬಿ.ಚಂದ್ರಶೇಖರ ಹೆಗ್ಗೋಡ್ಲು (70) ಎಂಬವರೇ ಈ ವ್ಯಕ್ತಿಯಾಗಿದ್ದು, ಇವರ ಮೊಬೈಲ್‌ಗೆ ಯಾರೋ ಅಪರಿಚತ ವ್ಯಕ್ತಿಗಳು ವಾಟ್ಸಪ್‌ನಲ್ಲಿ ಸಂಪರ್ಕಿಸಿ ಅವರನ್ನು ಮಾತಿನಿಂದ ಮರಳು ಮಾಡಿ ಲಿಂಕ್ ಕಳುಹಿಸಿದ್ದರು.

ಇದರ ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಚಂದ್ರಶೇಖರ್, ಆರೋಪಿಗಳು ತಿಳಿಸಿದಂತೆ ವಿವಿಧ ಬ್ಯಾಂಕ್ ಖಾತೆ ಗಳ ಮೂಲಕ 61.90 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಹೇಳಿದ ಅವಧಿಗೆ ಹೂಡಿಕೆ ಮಾಡಿದ ಹಣವಾ ಗಲೀ, ಲಾಭಾಂಶವಾಗಿ ನೀಡದೇ ಮೋಸ ಮಾಡಿದ್ದು, ಇದೀಗ ಅವರು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here