Home Uncategorized ಉಡುಪಿ ಶ್ರೀಕೃಷ್ಣಮಠದ ರಥಬೀದಿಯಲ್ಲಿ ಬಾಲಕಿಯ ಚಿನ್ನದ ಸರ ಸುಲಿಗೆ

ಉಡುಪಿ ಶ್ರೀಕೃಷ್ಣಮಠದ ರಥಬೀದಿಯಲ್ಲಿ ಬಾಲಕಿಯ ಚಿನ್ನದ ಸರ ಸುಲಿಗೆ

19
0

ಉಡುಪಿ, ಜ.19: ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣ ಮಠದ ರಥಬೀದಿಗೆ ತಾಯಿಯೊಂದಿಗೆ ಆಗಮಿಸಿದ್ದ ಬಾಲಕಿಯೊಬ್ಬಳ ಚಿನ್ನದ ಸರವನ್ನು ಅಪರಿಚಿತರಿಬ್ಬರು ಸುಲಿಗೆ ಮಾಡಿರುವ ಘಟನೆ ಜ.18ರಂದು ಸಂಜೆ ವೇಳೆ ನಡೆದಿದೆ. ಕೊರಂಗ್ರಪಾಡಿ ವಾಸುಕಿ ನಗರದ ಶರೀನ ಬೇಗಂ ಎಂಬವರು ತನ್ನ ಪುತ್ರಿ ಅನ್ಹ(4) ಜೊತೆಗೆ ರಥಬೀದಿಗೆ ಬಂದಿದ್ದು, ಕನಕ ಗೋಪುರದ ಹತ್ತಿರವಿರುವ ಅಂಗಡಿಯಲ್ಲಿ ಸಾಮಗ್ರಿಗಳನ್ನು ನೋಡುತ್ತಿದ್ದಾಗ 30-35 ವರ್ಷದ ಪ್ರಾಯದ ಅಪರಿಚಿತರಿಬ್ಬರು, ಅನ್ಹ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸೆಳೆದು ಪರಾರಿಯಾದರೆನ್ನಲಾಗಿದೆ.

ಕಳವಾದ ಚಿನ್ನದ ಸರದ ಮೌಲ್ಯ 50,000 ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here