Home Uncategorized ಉದ್ಯೋಗಕ್ಕೆ ತೆರಳುವುದಕ್ಕೆ ವಿರೋಧ: ಸೊಸೆಯನ್ನು ಕೊಂದ ಆರೋಪದ ಮೇಲೆ ಮಾವನ ಬಂಧನ

ಉದ್ಯೋಗಕ್ಕೆ ತೆರಳುವುದಕ್ಕೆ ವಿರೋಧ: ಸೊಸೆಯನ್ನು ಕೊಂದ ಆರೋಪದ ಮೇಲೆ ಮಾವನ ಬಂಧನ

17
0

ಮೈಸೂರು ಜಿಲ್ಲೆಯಲ್ಲಿ ಸೊಸೆಯನ್ನು ಹೊಡೆದು ಕೊಂದ ಆರೋಪದ ಮೇಲೆ 70 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಹಾರೋಹಳ್ಳಿ ಗ್ರಾಮದ ನಿವಾಸಿ ಘಂಟಯ್ಯ, ತನ್ನ ಸೊಸೆ ಉದ್ಯೋಗಕ್ಕಾಗಿ ಮನೆಯಿಂದ ಹೊರಬರುವುದನ್ನು ವಿರೋಧಿಸಿದ್ದರು. ಮೈಸೂರು: ಮೈಸೂರು ಜಿಲ್ಲೆಯಲ್ಲಿ ಸೊಸೆಯನ್ನು ಹೊಡೆದು ಕೊಂದ ಆರೋಪದ ಮೇಲೆ 70 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಹಾರೋಹಳ್ಳಿ ಗ್ರಾಮದ ನಿವಾಸಿ ಘಂಟಯ್ಯ, ತನ್ನ ಸೊಸೆ ಉದ್ಯೋಗಕ್ಕಾಗಿ ಮನೆಯಿಂದ ಹೊರಬರುವುದನ್ನು ವಿರೋಧಿಸಿದ್ದರು.

ಪತಿಯ ಆದಾಯ ಸಾಕಾಗದ ಕಾರಣ ಕವಿತಾ (ಸಂತ್ರಸ್ತ ಮಹಿಳೆ) ಖಾಸಗಿ ಕಾಲೇಜಿನಲ್ಲಿ ಅಟೆಂಡರ್ ಆಗಿ ಕೆಲಸಕ್ಕೆ ಸೇರಿದ್ದರು.

ಕಳೆದ 15 ವರ್ಷಗಳ ಹಿಂದೆ ದಂಪತಿ ಮದುವೆಯಾಗಿದ್ದರು. ಘಂಟಯ್ಯನಿಗೆ ಸೊಸೆ ಕವಿತಾ ಕೆಲಸಕ್ಕೆ ಹೋಗುವುದು ಇಷ್ಟವಾಗಿರಲಿಲ್ಲ. ಕೆಲಸ ಮಾಡುವುದನ್ನು ನಿಲ್ಲಿಸುವಂತೆ ಆಗಾಗ್ಗೆ ಜಗಳವಾಡುತ್ತಿದ್ದರು.

ನಂತರ, ಆಕೆಯ ಚಾರಿತ್ರ್ಯದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಗುರುವಾರ ಸಂಜೆ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾನೆ. ಮಹಿಳೆ ಗಾಯಗೊಂಡು ಸಾವಿಗೀಡಾಗಿದ್ದಾರೆ.

ಆರೋಪಿಯನ್ನು ವರುಣಾ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here