Home Uncategorized ಉಪ್ಪಿನಂಗಡಿ: ಕಾರುಗಳ ನಡುವೆ ಸರಣಿ ಅಪಘಾತ

ಉಪ್ಪಿನಂಗಡಿ: ಕಾರುಗಳ ನಡುವೆ ಸರಣಿ ಅಪಘಾತ

39
0

ಉಪ್ಪಿನಂಗಡಿ: ಟ್ರಾಫಿಕ್ ಜಾಮ್‍ನ ನಡುವೆಯೇ ನಾಲ್ಕು ಕಾರುಗಳ ಮಧ್ಯೆ ಸರಣಿ ಅಪಘಾತವಾದ ಘಟನೆ ಉಪ್ಪಿನಂಗಡಿ ನೇತ್ರಾವತಿ ಸೇತುವೆಯ ಮೇಲೆ ಡಿ.25ರಂದು ನಡೆದಿದೆ.

ಉಪ್ಪಿನಂಗಡಿ ಬಳಿಯ ಸಭಾಂಗಣವೊಂದರಲ್ಲಿ ಮದುವೆ ಸಮಾರಂಭ ಸೇರಿದಂತೆ ಹಲವು ಶುಭ ಸಮಾರಂಭಗಳು ಇದ್ದ ಕಾರಣದಿಂದ ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆ ಉಪ್ಪಿನಂಗಡಿಯ ಬಳಿ ಟ್ರಾಫಿಕ್ ಜಾಮ್‍ನಿಂದ ಕೂಡಿತ್ತು. ಈ ನಡುವೆ ಈ ಟ್ರಾಫಿಕ್ ಜಾಮ್‍ನಲ್ಲೇ ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರೊಂದು ಹಠಾತ್ ಬ್ರೇಕ್ ಹೊಡೆದಿದ್ದು, ಆಗ ಒಂದರ ಹಿಂಬಂದಿಗೆ ಒಂದರಂತೆ ಒಟ್ಟು ನಾಲ್ಕು ಕಾರುಗಳ ಸರಣಿ ಅಪಘಾತ ನಡೆಯಿತು. ಅಪಘಾತ ದಿಂದ ಕಾರುಗಳಿಗೆ ಹಾನಿಯಾಗಿದ್ದು, ಅದರಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಸಕಾಲದಲ್ಲಿ ಆಗಮಿಸಿದ ಉಪ್ಪಿನಂಗಡಿ ಪೊಲೀಸರು ಟ್ರಾಫಿಕ್ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

LEAVE A REPLY

Please enter your comment!
Please enter your name here