Home Uncategorized ಉಪ್ಪಿನಂಗಡಿ | ರಸ್ತೆ ಕಾಮಗಾರಿ ವೇಳೆ ಅವಾಂತರ: ವಿದ್ಯುತ್ ತಂತಿ ಮತ್ತು ಚಲಿಸುತ್ತಿದ್ದ ಲಾರಿ ಮೇಲೆ...

ಉಪ್ಪಿನಂಗಡಿ | ರಸ್ತೆ ಕಾಮಗಾರಿ ವೇಳೆ ಅವಾಂತರ: ವಿದ್ಯುತ್ ತಂತಿ ಮತ್ತು ಚಲಿಸುತ್ತಿದ್ದ ಲಾರಿ ಮೇಲೆ ಬಿದ್ದ ಮರ

30
0

ಉಪ್ಪಿನಂಗಡಿ, ಡಿ.28: ಬೊಳುವಾರು- ಉಪ್ಪಿನಂಗಡಿ ಹೆದ್ದಾರಿಯಲ್ಲಿ ಬೇರಿಕೆಯಿಂದ ಬೊಳಂತಿಲದವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಹಿಟಾಚಿನಲ್ಲಿ ಮಣ್ಣು ತೆಗೆಯುತ್ತಿರುವ ಸಂದರ್ಭ ರಸ್ತೆಯಲ್ಲಿ ಸಂಚರಿಸುತ್ತಿದ್ದ ಲಾರಿಯೊಂದರ ಮೇಲೆ ಮರ ಬಿದ್ದ ಘಟನೆ ಬೇರಿಕೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.

ಇದೇವೇಳೆ ಮರ ವಿದ್ಯುತ್ ತಂತಿಗೂ ತಗಲಿದ್ದರಿಂದ, ಐದು ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಇದರಿಂದ ರಸ್ತೆ ಸಂಚಾರಕ್ಕೆ ಕೆಲ ಹೊತ್ತು ತಡೆಯುಂಟಾಗುವಂತಾಗಿತ್ತು.

ಘಟನೆಯಿಂದ ಯಾರಿಗೂ ಅಪಾಯ ಸಂಭವಿಸಿಲ್ಲ. ಲಾರಿಗೆ ಹಾನಿಯಾಗಿದೆ.

 

 

 

LEAVE A REPLY

Please enter your comment!
Please enter your name here