ಮಂಗಳೂರು: ಕರ್ನಾಟಕ ಹಾಶಿಮಿ ಕೌನ್ಸಿಲ್ ಇದರ ಆಶ್ರಯದಲ್ಲಿ ಕರ್ನಾಟಕ ಸಂಪೂರ್ಣ ಹಾಶಿಮಿ ಸಂಗಮವು ಉಳ್ಳಾಲ ಸಯ್ಯಿದ್ ಮದನಿ ಹಾಲ್ ನಲ್ಲಿ ನಡೆಯಿತು.
ಉಳ್ಳಾಲ ಮದನಿ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮ ಉದ್ಘಾಟಿಸಿದರು. ಸಯ್ಯಿದ್ ಶಹೀರ್ ಜಮಲುಲೈಲಿ ಅಲ್ ಹಾಶಿಮಿ ಕಾಸರಗೋಡು ದುಆ ನೆರವೇರಿಸಿದರು.
ಜಾಮಿಅಃ ಹಾಶಿಮಿಯ್ಯ ಪ್ರಧಾನ ಕಾರ್ಯದರ್ಶಿ, ಶೈಖುನಾ ಬಾದುಶ ಸಖಾಫಿ ಭವಿಷ್ಯದ ಭಾರತದಲ್ಲಿ ದಅ್‌ವಾ ಅನಿವಾರ್ಯ ತೆಯ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ ಎ ಅಬ್ದುಲ್ ರಶೀದ್ ಮದನಿ ಸೌಹಾರ್ದತೆಯ ಮೂಲಕ ರಾಷ್ಟ್ರದ ಭವಿಷ್ಯವನ್ನು ಬೆಳೆಗಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದರು. ಶರೀಫ್ ಹಾಶಿಮಿ ಬನಾರಿ ಸ್ವಾಗತಿಸಿದರು.
ಈ ಸಂದರ್ಭ ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಶರೀಅತ್ ಕಾಲೇಜ್ ಪ್ರಾಂಶುಪಾಲ ಅಹ್ಮದ್ ಕುಟ್ಟಿ ಸಖಾಫಿ, ಕರ್ನಾಟಕ ರಾಜ್ಯ ಎಸ್ ವೈ ಎಸ್ ಮುಖಂಡರಾದ ಅಶ್ರಫ್ ಸಅದಿ ಮಲ್ಲೂರ್ , ಕರೀಂ ಹಾಜಿ ಉಳ್ಳಾಲ ಉಪಸ್ಥಿತರಿದ್ದರು.