Home Uncategorized ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ, ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ! 

ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ, ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ! 

15
0

ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ್ದು ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಬೆಂಗಳೂರು: ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ್ದು ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ.

ಫ್ಲೈ ಬೈ ವೈರ್ ಪ್ರೀಮಿಯರ್ 1ಎ ವಿಮಾನವು ತನ್ನ ನೋಸ್ ಲ್ಯಾಂಡಿಂಗ್ ಗೇರ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆಯಲ್ಲಿ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಘಟನೆ ನಡೆದ ಸಂದರ್ಭದಲ್ಲಿ ಪೈಲಟ್‌ ಮತ್ತು ಸಹ ಪೈಲಟ್ ಗಳನ್ನು ಬಿಟ್ಟರೆ ಯಾವುದೇ ಪ್ರಯಾಣಿಕರು ಇರಲಿಲ್ಲ. ವಿಮಾನವು ಎಚ್ ಎಎಲ್ ವಿಮಾನ ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

#fly by #Wire #Premier 1A #Aircraft Makes Emergency Landing at #HAL #Airport in Bengaluru After Glitch With Nose #Landing Gear#FlyByWirePremier1AAircraft #EmergencyLanding #HALAirport #Bengaluru pic.twitter.com/LJDeTbGmiP
— Shiv Kumar Maurya (@ShivKum60592848) July 12, 2023

ಈ ಬಗ್ಗೆ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ- DGCA) ಅಧಿಕೃತ ಹೇಳಿಕೆ ನೀಡಿದ್ದು, “ಎ ಫ್ಲೈ ಬೈ ವೈರ್ ಪ್ರೀಮಿಯರ್ 1 ಎ ಏರ್‌ಕ್ರಾಫ್ಟ್ ವಿಟಿ-ಕೆಬಿಎನ್ ಸೆಕ್ಟರ್ ‘ಎಚ್‌ಎಎಲ್ ಏರ್‌ಪೋರ್ಟ್ ಬೆಂಗಳೂರು ಟು ಬಿಐಎಎಲ್’ನಲ್ಲಿ ಕಾರ್ಯನಿರ್ವಹಿಸುವ ವಿಮಾನವು ನೋಸ್ ಲ್ಯಾಂಡಿಂಗ್ ಗೇರ್ ಮಾಡಲಾಗದೆ ಏರ್‌ಟರ್ನ್‌ಬ್ಯಾಕ್‌ ಆಗಿದೆ. ಟೇಕ್-ಆಫ್ ಆದ ನಂತರ ಅದು ವಾಪಸ್ಸಾಗಿದೆ. ವಿಮಾನದ ನೋಸ್‌ ಗೇರ್ ಕಾರ್ಯ ನಿರ್ವಹಿಸದ ಕಾರಣ ವಿಮಾನದ ಮುಂಭಾಗ ರನ್ ವೇಗೆ ಉಜ್ಜಿಕೊಂಡು ಹೋಗಿದೆ. ಅದೃಷ್ಟವಶಾತ್ ಅದರಲ್ಲಿ ಇಬ್ಬರು ಪೈಲಟ್‌ಗಳಿದ್ದು, ಯಾವುದೇ ಪ್ರಯಾಣಿಕರು ವಿಮಾನದಲ್ಲಿ ಇರಲಿಲ್ಲ. ಪೈಲಟ್ ಗಳಿಗೂ ಯಾವುದೇ ಆಪಾಯವಾಗಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಕಲಬುರಗಿ: ತಾಂತ್ರಿಕ ದೋಷದಿಂದ ಜಮೀನಿನಲ್ಲಿ ತರಬೇತಿ ನಿರತ ವಿಮಾನ ತುರ್ತು ಭೂಸ್ಪರ್ಶ

ಡಿಜಿಸಿಎ ಹಂಚಿಕೊಂಡ ಘಟನೆಯ ವೀಡಿಯೊದಲ್ಲಿ ವಿಮಾನವು ರನ್‌ವೇಯಲ್ಲಿ ಸುರಕ್ಷಿತವಾಗಿ ಇಳಿದಿದೆ. ಏರ್‌ಟರ್ನ್‌ಬ್ಯಾಕ್’ ಎಂಬುದು ವಿಮಾನವು ನಿರ್ಗಮನದ ಬಳಿಕ ಕಾರಣಾಂತರಗಳಿಂದ ಏರೋಡ್ರೋಮ್‌ ಗೆ ಮರಳುವ ಸನ್ನಿವೇಶವಾಗಿದೆ. ಟೇಕ್-ಆಫ್ ಸಮಯದಲ್ಲಿ ಅಥವಾ ಸ್ವಲ್ಪ ಸಮಯದ ನಂತರ ತುರ್ತು ಅಥವಾ ಅಸಹಜ ಪರಿಸ್ಥಿತಿಯು ‘ಏರ್‌ಟರ್ನ್‌ಬ್ಯಾಕ್’ ಗೆ ಸಾಮಾನ್ಯ ಕಾರಣವಾಗಿದೆ, ಇದು ಅತ್ಯಂತ ಸಾಮಾನ್ಯವಾದ ಎಂಜಿನ್ ವೈಫಲ್ಯವಾಗಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.
 

LEAVE A REPLY

Please enter your comment!
Please enter your name here