Home ಕರ್ನಾಟಕ ಎಚ್‌.ಡಿ.ರೇವಣ್ಣ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣ | ಆರೋಪಿ ಸತೀಶ್ ಬಾಬುಗೆ 14 ದಿನ...

ಎಚ್‌.ಡಿ.ರೇವಣ್ಣ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣ | ಆರೋಪಿ ಸತೀಶ್ ಬಾಬುಗೆ 14 ದಿನ ನ್ಯಾಯಾಂಗ ಬಂಧನ

19
0

ಮೈಸೂರು : ಹಾಸನದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡೀಯೋ ಸಂಬಂಧ ಶಾಸಕ ಎಚ್‌.ಡಿ.ರೇವಣ್ಣ ಮನೆ ಕೆಲಸದ ಮಹಿಳೆ ಅಪಹರಣದ ಆರೋಪ ಹಿನ್ನಲೆ ಎರಡನೇ ಆರೋಪಿ ಸತೀಶ್ ಬಾಬು ಅವರ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14 ದಿನಗಳವರಗೆ ನ್ಯಾಯಾಂಗ ಬಂಧನಕ್ಕೆ ಅದೇಶಿಸಿದೆ.

ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮನೆಯ ಕೆಲಸದ ಮಹಿಳೆಯನ್ನು ಅಪಹರಿಸಲಾಗಿದೆ ಎಂದು ಆಕೆಯ ಪುತ್ರ ರಾಜು ಮೇ.2ರಂದು ನೀಡಿದ ದೂರಿನ ಹಿನ್ನಲೆಯಲ್ಲಿ ಎರಡನೇ ಆರೋಪಿ ಸತೀಶ್ ಬಾಬು ಅವರನ್ನು ನಿನ್ನೆ ರಾತ್ರಿಯೇ ಕೆ.ಆರ್.ನಗರ ಪೊಲೀಸರು ಬಂದಿಸಿದ್ದರು ಎನ್ನಲಾಗಿದೆ. ನಂತರ ಶುಕ್ರವಾರ ಬೆಳಿಗ್ಗೆ ಕೆ.ಆರ್.ನಗರ ನ್ಯಾಯಾಲಯಕ್ಕೆ ಹಾಜರು ಪಡಿಲಾಗಿದ್ದು, ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಆಶ್ಲೀಲ ಪ್ರಕರಣದಲ್ಲಿ ಮನೆ ಕೆಲಸದ ಮಹಿಳೆಯನ್ನು ಬಲವಂತವಾಗಿ ಲೈಂಗಿಕ ಕ್ರಿಯೆಗೆ ಒಳಪಡಿಸಲಾಗಿತ್ತು ಎನ್ನಲಾಗಿದ್ದು, ಎ.29 ರಂದು ಶಾಸಕ ಎಚ್‌.ಡಿ.ರೇವಣ್ಣ ಅವರ ಸಲಹೆಯಂತೆ ಸತೀಶ್ ಬಾಬು ಎಂಬುವವರು ಮಹಿಳೆಯನ್ನು ಅಪಹರಿಸಿದ್ದರು ಎನ್ನಲಾಗಿದೆ.

ಈ ಸಂಬಂಧ ಮೇ.2 ರಂದು ಮಹಿಳೆಯ ಪುತ್ರ ರಾಜು ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಶಾಸಕ ರೇವಣ್ಣ ಮತ್ತು ಸತೀಶ್ ಬಾಬು ಅವರು ನನ್ನ ತಾಯಿಯನ್ನು ಅಪಹರಿಸಿದ್ದಾರೆ. ಅವರ ಜೀವಕ್ಕೆ ಅಪಾಯ ಇದೆ  ದೂರು ನೀಡಿದ್ದರು. ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

LEAVE A REPLY

Please enter your comment!
Please enter your name here