ಹುಬ್ಬಳ್ಳಿ: ‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಪಡಿಸಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬೀಳಲಿದೆ’ ಎಂದು ವಿಧಾನ ಸಭಾ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಎಚ್ಚರಿಕೆ ನೀಡಿದರು.
ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್ ಸಂಘಟನೆಯು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ನ್ಯೂನತೆಗಳನ್ನು, ಆತಂಕಗಳನ್ನು ಬೊಟ್ಟು ಮಾಡಿ ತೋರಿಸಿ, ಅವುಗಳನ್ನು ಸರಿಪಡಿಸಿ. ಅದನ್ನು ಬಿಟ್ಟು ತಲೆನೋವು ಬಂತೆಂದರೆ ತಲೆ ಕಡಿಯುವಂತಹ ಕ್ರಮ ಬೇಡ’ ಎಂದು ಹೇಳಿದರು. ‘ನಾವು ಚುನಾವಣೆ ವೇಳೆ ಎನ್‌ಇಪಿ ರದ್ದುಗೊಳಿಸುತ್ತೇವೆ ಎಂದು ಹೇಳಿದ್ದೇವೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂಬ ಹಠಕ್ಕೆ ಬಿದ್ದು, ಮೊಸರಲ್ಲಿ ಕಲ್ಲು ಹುಡುಕುವುದು ಬೇಡ. ಒಳ್ಳೆಯ ಅಂಶಗಳನ್ನು ಒಪ್ಪಿಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತನ್ನಿ’ ಎಂದು ಒತ್ತಾಯಿಸಿದರು.
‘ಒಣಪ್ರತಿಷ್ಠೆಯನ್ನು ಮುಂದಿ ಟ್ಟುಕೊಂಡು ಇಲ್ಲಸಲ್ಲದ ಊಹಾಪೋಹಾಗಳನ್ನು ಹರಿಬಿಟ್ಟು ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡಬೇಡಿ. ಎನ್‌ಇಪಿಯನ್ನು ಹೊರಗೆಸೆಯುವಂತಹ ವಿಧ್ವಂಸಕ ನಿರ್ಧಾರವನ್ನು ಕೈಗೊಳ್ಳಬೇಡಿ’ ಎಂದು ಮನವಿ ಮಾಡಿದರು. ‘ಈ ನೀತಿ ಸರಿ ಇಲ್ಲ ಎಂದು ಹೇಳುವುದಾದರೆ, ಸರಿ ಇದ್ದದ್ದು ಯಾವುದು ಎನ್ನುವುದಾದರೂ ಹೇಳಿ’ ಎಂದು ಅವರು ಸವಾಲೆಸೆದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಬದಲಿಗೆ ಕರ್ನಾಟಕವೇ ಬೇರೊಂದು ಶಿಕ್ಷಣ ನೀತಿ ರೂಪಿಸಲು ಹೊರಟಿದೆ. ಇದಕ್ಕೆ ಬದಲಾಗಿ ಈಗಷ್ಟೇ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಮಹತ್ವ ಕುರಿತು 26 ಜಿಲ್ಲಾ ಕೇಂದ್ರದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ, ಅನೇಕ ಶಿಕ್ಷಣ ತಜ್ಞರ ಜತೆ ಸಂವಾದ ನಡೆಸಲಾಗಿದೆ’ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯು ರಾಷ್ಟ್ರಾಭಿಮಾನ ರೂಪಿಸಿ ವ್ಯಕ್ತಿ ವಿಕಸನಗೊಳಿಸಿ ದೇಶದ ಬಗ್ಗೆ ಅರಿವು ಮೂಡಿಸಲು ತ್ತದೆ. ಎಲ್ಲರೂ ಇದರ ಅಗತ್ಯ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು.ಶಿವಮೊಗ್ಗ ಘಟನೆಗೆ ರಾಜ್ಯ ಸರ್ಕಾರ ಪ್ರೋತ್ಸಾಹ: ಇನ್ನು ರಾಜ್ಯ ಸರ್ಕಾರ ಶಿವಮೊಗ್ಗ ಘಟನೆಯನ್ನು ಖಂಡಿಸಿದರು. ಇನ್ನು ಇಸ್ರೇಲ್ ಮೇಲೆ ಹಮಾಸ್ ಉಗ್ತರ ದಾಳಿಯನ್ನು ಸಹ ಖಂಡಿಸಿ ಇಂಡಿಯಾ ಒಕ್ಕೂಟ ಬೆಂಬಲ ಸಗ ಅಘಾತಕಾರಿ ಎಂದರು
The post ಎನ್ಇಪಿ ರದ್ದಾದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ: ಕಾಗೇರಿ appeared first on Ain Live News.