Home Uncategorized ಎಸ್‍ಎಸ್‍ಎಫ್ ಸವಣೂರು ಸೆಕ್ಟರ್ ಸಾಹಿತ್ಯೋತ್ಸವ: ಪಳ್ಳತ್ತಾರು ಚಾಂಪಿಯನ್

ಎಸ್‍ಎಸ್‍ಎಫ್ ಸವಣೂರು ಸೆಕ್ಟರ್ ಸಾಹಿತ್ಯೋತ್ಸವ: ಪಳ್ಳತ್ತಾರು ಚಾಂಪಿಯನ್

8
0

ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ ಎಸ್ ಎಫ್ ಸವಣೂರು ಸೆಕ್ಟರ್ ಇದರ ವತಿಯಿಂದ ನಿರೀಕ್ಷೆಗಳ ನೀಲ ನಕ್ಷೆ ಎಂಬ ಧ್ಯೇಯ ವಾಕ್ಯದಡಿ ಸಾಹಿತ್ಯೋತ್ಸವ ಕಾರ್ಯಕ್ರಮವು ಬೆಳಂದೂರು ಗ್ರಾಮದ ಪಳ್ಳತ್ತಾರು ಮದ್ರಸ ಸಭಾಂಗಣದಲ್ಲಿ ನಡೆಯಿತು.

ಕೂರತ್ ಮುದರ್ರಿಸ್ ಅಬ್ದುಲ್ ಖಾದರ್ ಹನೀಫಿ ಧ್ವಜಾರೋಹಣ ನೆರವೇರಿಸಿದರು. ಎಸ್ ಎಸ್ ಎಫ್ ಸವಣೂರು ಸೆಕ್ಟರ್ ವ್ಯಾಪ್ತಿಗೊಳಪಟ್ಟ ಎಸ್ ಎಸ್ ಎಫ್ ಕೂರತ್, ಬೆಳಂದೂರು, ಬೈತಡ್ಕ ಹಾಗೂ ಸವಣೂರು ಶಾಖೆಗಳ ಸುಮಾರು 125 ವಿದ್ಯಾರ್ಥಿಗಳು ಹಾದೀ ತಂಙಳ್, ಹಂಝ ಬೆಳಂದೂರು, ಅನಸ್ ಅನ್ಯಾಡಿ ವೇದಿಕೆಗಳಲ್ಲಿ ಐದು ವಿಭಾಗಗಳಲ್ಲಿ ನಡೆದ ಸುಮಾರು 117 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

971 ಅಂಕಗಳೊಂದಿಗೆ ಎಸ್ ಎಸ್ ಎಫ್ ಬೆಳಂದೂರು ಶಾಖೆಯು ಚಾಂಪಿಯನ್ ಪಟ್ಟ ಅಲಂಕರಿಸಿದರೆ 734 ಅಂಕಗಳೊಂದಿಗೆ ಎಸ್ ಎಸ್ ಎಫ್ ಕೂರತ್ ಶಾಖೆಯು ದ್ವಿತೀಯ ಸ್ಥಾನ ಪಡೆಯಿತು. ಬೈತಡ್ಕ ಶಾಖೆಯು ತೃತೀಯ ಸ್ಥಾನ ಹಾಗೂ ಸವಣೂರು ಶಾಖೆ ಚತುರ್ಥ ಸ್ಥಾನ ಪಡೆಯಿತು.

ಸ್ಟೇಜ್ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕ ಪಡೆದ ಸವಣೂರು ಶಾಖೆಯ ಉವೈಸ್ ಪೆನ್ ಆಫ್ ದ ಫೆಸ್ಟ್ ಬಹುಮಾನ ಪಡೆದರೆ ಸ್ಟೇಜೇತರ ಸ್ಪರ್ಧೆಗಳಲ್ಲಿ ಬೆಳಂದೂರು ಶಾಖೆಯ ಫಾಯಿಝ್ ಬನಾರಿ ಸ್ಟಾರ್ ಆಫ್ ದ ಫೆಸ್ಟ್ ಬಹುಮಾನ ಪಡೆದರು.

ಈ ಸಂದರ್ಭ ಎಸ್ ಎಸ್ ಎಫ್ ಸವಣೂರು ಸೆಕ್ಟರ್ ಅಧ್ಯಕ್ಷ ಜಲೀಲ್ ಮುಈನಿ, ಕಾರ್ಯದರ್ಶಿ ಬಾತಿಷ ದೇವಸ್ಯ, ಕೋಶಾ ಧಿಕಾರಿ ನೌಶಾದ್ ಕೂರತ್, ಸ್ವಾಗತ ಸಮಿತಿ ಅಧ್ಯಕ್ಷ ಸಿದ್ದೀಕ್ ಪಳ್ಳತ್ತಾರು,ಕನ್ವೀನರ್ ಇಲ್ಯಾಸ್ ಅಂಜದಿ ಕೂರತ್, ಪಳ್ಳತ್ತಾರು ಜಮಾಅತ್ ಅಧ್ಯಕ್ಷರು, ಉಪಾಧ್ಯಕ್ಷ ಯೂಸುಫ್ ಗುಂಡಿನಾರು, ಕಾರ್ಯದರ್ಶಿ ಶಂಸುದ್ದೀನ್ ಬನಾರಿ, ಸಂಘಟನೆಯ ಹಿತೈಷಿಗಳಾದ ಯೂಸುಫ್ ಬಯಂಬಾಡಿ, ರಝಾಕ್ ಕೂರತ್, ಸುಲೈಮನ್ ಅನ್ಯಾಡಿ, ಅಬೂಬಕರ್ ಹಾಜಿ ನಡುಗುಡ್ಡೆ, ಲತೀಫ್ ಉಸ್ತಾದ್ ಕೂರತ್, ಯೂಸುಫ್ ಸಖಾಫಿ, ಉಮ್ಮರ್ ಕೂಂಕ್ಯ, ಅಬೂಬಕ್ಕರ್ ಫಾಳಿಲಿ, ಸಯ್ಯದ್ ಶಮ್ಮಾಸ್ ಮೊದಲಾದವರು ಉಪಸ್ಥಿತರಿದ್ದರು. ನವಾಝ್ ಸಖಾಫಿ, ಇಸ್ಮಾಯಿಲ್ ಹಾಜಿ ಬೈತಡ್ಕ, ನಝೀರ್ ದೇವಸ್ಯ ಶುಭ ಹಾರೈಸಿದರು.

ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ನಾಸಿರ್ ಮಾಸ್ಟರ್ ಹೀರೆಬಂಡಾಡಿ, ಉಮರ್ ಅಂಜದಿ ಕುಕ್ಕಿಲ, ರಾಶಿದ್ ಜೌಹರಿ ಕರಾಯ, ಸವಾದ್ ಮುಈನಿ ಮಿತ್ತೂರು, ಹಸೈನಾರ್ ನೆಕ್ಕಿಲ ತೀರ್ಪುಗಾರರಾಗಿ ಸಹಕರಿಸಿದರು. ಅಝೀಝ್ ಅಂಜದಿ ಹಾಗೂ ಇಲ್ಯಾಸ್ ಅಂಜದಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here