ದೇರಳಕಟ್ಟೆ: ಎಸ್ಸೆಸ್ಸೆಫ್ ಬೆಳ್ಮ ಸೆಕ್ಟರ್ ವತಿಯಿಂದ ‘ಸಾಹಿತ್ಯೋತ್ಸವ’ ಕಾರ್ಯಕ್ರಮ ರವಿವಾರ ಅಡ್ಕರೆಪಡ್ಪು ರಹ್ಮಾನಿಯಾ ಮದ್ರಸದಲ್ಲಿ ನಡೆಯಿತು.
ಮುಹಿಯದ್ದೀನ್ ಜುಮಾ ಮಸೀದಿ ಅಡ್ಕರೆ ಪಡ್ಪು ಖತೀಬ್ ಮುಹಮ್ಮದ್ ಸಖಾಫಿ ಪೂಡಲ್ ಧ್ವಜಾರೋಹಣಗೈದು, ದುವಾ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾಹಿತ್ಯೋತ್ಸವ ಸ್ವಾಗತ ಸಮಿತಿ ನಿರ್ದೇಶಕ, ನಿವೃತ ಅಧ್ಯಾಪಕ ಅಬ್ದುಲ್ ಲತೀಫ್ ಕಲ್ಪಾದೆ, ಮುತ್ತಲಿಬ್ ಸಖಾಫಿ ಬಾಕಿಮಾರ್, ಕೆಎಂಜೆ ನಾಟೆಕಲ್ ಸರ್ಕಲ್ ಕಾರ್ಯದರ್ಶಿ ಹನೀಫ್ ಸಖಾಫಿ ಬದ್ಯಾರ್ ಮಾತನಾಡಿದರು. ಸಲಾಂ ಮಾಸ್ಟರ್ ಹರೇಕಳ, ಝಾಕಿರ್ ಫಾಳಿಲಿ ಮುಡಿಪು, ಜಾಫರ್ ಸಖಾಫಿ ಮುಡಿಪು, ಸಿರಾಜ್ ಅಮ್ಮೆಂಬಳ, ಹಮೀದ್ ಸಖಾಫಿ ಆನೆಕಲ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಮುಸ್ತಫ ಸಅದಿ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
ಕಲಾ ಕಾರ್ಯಕ್ರಮದಲ್ಲಿ ರೆಂಜಾಡಿ ಶಾಖೆ ಪ್ರಥಮ ಸ್ಥಾನ ಪಡೆಯಿತು. ಕಲ್ಪಾದೆ ಶಾಖೆ ದ್ವಿತೀಯ ಸ್ಥಾನ ಪಡೆಯಿತು. ಅಡ್ಕರೆ, ಕಾನೆಕರೆ, ಬಾಕಿಮಾರ್, ಶಾಂತಿಭಾಗ್, ಪಾಸ್ಪಾಡಿ ಶಾಖೆಗಳ ಪ್ರತಿಭೆಗಳು ಉತ್ತಮ ಪ್ರದರ್ಶನ ನೀಡಿದರು.
ಎಸ್ಸೆಸ್ಸೆಫ್ ದೇರಳಕಟ್ಟೆ ಡಿವಿಷನ್ ಅಧ್ಯಕ್ಷರು ನೌಫಲ್ ಅಹ್ಸನಿ ಕಿನ್ಯ, ಕ್ಯೂಡಿ ಕಾರ್ಯದರ್ಶಿ ಮುಫೀದ್ ಬದ್ಯಾರ್, ಕಾರ್ಯಕಾರಿ ಸದಸ್ಯ ಅಶ್ರಫ್ ಪಾರೆ ಉರುಮಣೆ ಅತಿಥಿಗಳಾಗಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಮುಹಿಯದ್ದೀನ್ ಜುಮಾ ಮಸೀದಿ ಅಡ್ಕರೆಪಡ್ಪುಅಧ್ಯಕ್ಷ ಜಾಫರ್, ಕಾರ್ಯದರ್ಶಿ ಮುಸ್ತಫ, ಕೆಎಂಜೆ ಅಡ್ಕರೆ ಪಡ್ಪುಅಧ್ಯಕ್ಷ ಮುಹಮ್ಮದ್, ಅಬ್ದುಲ್ ಸತ್ತಾರ್ ಕಲ್ಪಾದೆ, ರಹ್ಮಾನ್ ಕಾನೆಕೆರೆ, ಇಲ್ಯಾಸ್ ಅಡ್ಕರೆ, ಸ್ವಾಲಿಹ್ ಬಿ.ಆರ್., ಸ್ವಾಲಿಹ್ ಬಡಕಬೈಲ್, ಹಮೀದ್ ಪೊಯ್ದೆಲ್, ಮುಹಿಯದ್ದೀನ್ ಬಾಕಿಮಾರ್, ಮುಫೀದ್ ಕಾನೆಕೆರೆ, ನವಾಝ್ ರೆಂಜಾಡಿ, ಫಯಾಝ್ ಕಲ್ಪಾದೆ ಮತ್ತಿತರರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಬೆಳ್ಮ ಸೆಕ್ಟರ್ ಅಧ್ಯಕ್ಷ ನೌಶಾದ್ ಸಖಾಫಿ ಪಾಸ್ಪಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಹಾರಿಸ್ ಅಡ್ಕರೆ ವಂದಿಸಿದರು.