Home Uncategorized ಏಕಕಾಲದಲ್ಲಿ ಚುನಾವಣೆಗೆ 81% ಜನರ ಬೆಂಬಲ: ಕೇಂದ್ರ ಸರಕಾರ

ಏಕಕಾಲದಲ್ಲಿ ಚುನಾವಣೆಗೆ 81% ಜನರ ಬೆಂಬಲ: ಕೇಂದ್ರ ಸರಕಾರ

28
0

ಹೊಸದಿಲ್ಲಿ : ಏಕಕಾಲದಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸುವ ಪ್ರಸ್ತಾವಕ್ಕೆ ಸಂಬಂಧಿಸಿ ಉನ್ನತಾಧಿಕಾರದ ಸಮಿತಿಗೆ ಬಂದ 20,972 ಪ್ರತಿಕ್ರಿಯೆಗಳ ಪೈಕಿ 81% ಶೇಕಡ ಈ ಪ್ರಸ್ತಾವಕ್ಕೆ ಬೆಂಬಲ ಸೂಚಿಸಿವೆ ಎಂದು ಕೇಂದ್ರ ಕಾನೂನು ಸಚಿವಾಲಯ ರವಿವಾರ ತಿಳಿಸಿದೆ.

‘ಒಂದು ದೇಶ, ಒಂದು ಚುನಾವಣೆ’ಯ ಕಲ್ಪನೆಯನ್ನು ಭಾರತೀಯ ಜನತಾ ಪಕ್ಷವು 2014ರ ತನ್ನ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿತ್ತು.

ಸೆಪ್ಟಂಬರ್ ನಲ್ಲಿ, ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಸಾಧ್ಯತೆಯ ಬಗ್ಗೆ ಪರಿಶೀಲಿಸಲು ಕೇಂದ್ರ ಸರಕಾರವು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದಲ್ಲಿ ಎಂಟು ಸದಸ್ಯರ ಉನ್ನತಾಧಿಕಾರದ ಸಮಿತಿಯೊಂದನ್ನು ರಚಿಸಿತ್ತು.

ಸಮಿತಿಯು ರವಿವಾರ ತನ್ನ ಮೂರನೇ ಸಭೆಯನ್ನು ನಡೆಸಿತು. ಈ ಪ್ರಸ್ತಾವದ ಬಗ್ಗೆ ಜನವರಿ 5ರಿಂದ 15ರವರೆಗೆ ಅಭಿಪ್ರಾಯಗಳನ್ನು ಸಲ್ಲಿಸುವಂತೆ ಸಮಿತಿಯು ಸಾರ್ವಜನಿಕರನ್ನು ಕೋರಿತ್ತು ಎಂದು ಸಭೆಯ ಬಳಿಕ ಕಾನೂನು ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘46 ರಾಜಕೀಯ ಪಕ್ಷಗಳಿಂದಲೂ ಸಲಹೆಗಳನ್ನು ಆಹ್ವಾನಿಸಲಾಗಿತ್ತು. ಈವರೆಗೆ 17 ರಾಜಕೀಯ ಪಕ್ಷಗಳು ಸಲಹೆಗಳನ್ನು ನೀಡಿವೆ. ಭಾರತೀಯ ಚುನಾವಣಾ ಆಯೋಗದ ಅಭಿಪ್ರಾಯವನ್ನೂ ಸಮಿತಿಯು ಪಡೆದುಕೊಂಡಿದೆ’’ ಎಂದು ಅದು ಹೇಳಿದೆ.

LEAVE A REPLY

Please enter your comment!
Please enter your name here