Home Uncategorized ಏಕರೂಪ ನಾಗರಿಕ ಸಂಹಿತೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ರಾಜ್ಯ ಅಲ್ಪಸಂಖ್ಯಾತ ಆಯೋಗದಿಂದ ಸಭೆ

ಏಕರೂಪ ನಾಗರಿಕ ಸಂಹಿತೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ರಾಜ್ಯ ಅಲ್ಪಸಂಖ್ಯಾತ ಆಯೋಗದಿಂದ ಸಭೆ

23
0

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ಕಾನೂನು ಆಯೋಗ ಸಾರ್ವಜನಿಕರು ಹಾಗೂ ಧಾರ್ಮಿಕ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸುವುದಕ್ಕೆ ಮುಂದಾಗಿರುವ ಬೆನ್ನಲ್ಲೇ ರಾಜ್ಯ ಅಲ್ಪಸಂಖ್ಯಾತ ಆಯೋಗ (ಕೆಎಸ್ಎಂಸಿ) ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯಗಳ ನಾಯಕರ ಸಭೆ ನಡೆಸಿದೆ.  ಬೆಂಗಳೂರು: ಏಕರೂಪ ನಾಗರಿಕ ಸಂಹಿತೆ ( ಯುಸಿಸಿ) ಕುರಿತು ಕಾನೂನು ಆಯೋಗ ಸಾರ್ವಜನಿಕರು ಹಾಗೂ ಧಾರ್ಮಿಕ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸುವುದಕ್ಕೆ ಮುಂದಾಗಿರುವ ಬೆನ್ನಲ್ಲೇ ರಾಜ್ಯ ಅಲ್ಪಸಂಖ್ಯಾತ ಆಯೋಗ (ಕೆಎಸ್ಎಂಸಿ) ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯಗಳ ನಾಯಕರ ಸಭೆ ನಡೆಸಿದೆ. 

ಸೋಮವಾರ ಜೂ.27 ರಂದು ಈ ಸಭೆ ನಡೆದಿದ್ದು ಸಮುದಾಯಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಕೆಎಸ್ಎಂಸಿ ಅಧ್ಯಕ್ಷ ಅಬ್ದುಲ್ ಅಜೀಮ್ ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದು, ಮುಸ್ಲಿಂ ಸಮುದಾಯದ 25-30 ನಾಯಕರು ಹಾಗೂ ಕ್ರೈಸ್ತ ಸಮುದಾಯದ 25 ಮಂದಿ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಜೈನ, ಬುದ್ಧ, ಸಿಖ್, ಪಾರ್ಸಿ ಸಮುದಾಯಗಳ ನಾಯಕರೊಂದಿಗೆ ಮಂಗಳವಾರ ಸಭೆ ನಡೆಯಲಿದೆ. 

ಇದನ್ನೂ ಓದಿ: ಒಂದು ದೇಶದಲ್ಲಿ ಎರಡೆರಡು ಕಾನೂನುಗಳು ಇರಲು ಹೇಗೆ ಸಾಧ್ಯ?: ಏಕರೂಪ ನಾಗರಿಕ ಸಂಹಿತೆ ಪರ ಪ್ರಧಾನಿ ಮೋದಿ ಹೇಳಿಕೆ

ಸಭೆಯಲ್ಲಿ ಯುಸಿಸಿಯ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು,  ನಿಗದಿತ ಪ್ರೋಫಾರ್ಮಾದಲ್ಲಿ ಅವರ ಪ್ರತಿಕ್ರಿಯೆಗಳನ್ನು ಜು.14 ರ ವೇಳೆಗೆ ಸಲ್ಲಿಸುವಂತೆ ಕೆಎಸ್ಎಂಸಿ ಅಧ್ಯಕ್ಷರು ಸೂಚನೆ ನೀಡಿದ್ದಾರೆ. ಈ ಬಳಿಕ ಕೆಎಸ್ಎಂ ಸಿ ಅಧ್ಯಕ್ಷರೂ ಸಹ ರಾಜ್ಯ ಅಲ್ಪಸಂಖ್ಯಾತ ಆಯೋಗ ಸಹ ಸಭೆಯಲ್ಲಿ ಭಾಗಿಯಾಗಿದ್ದ ನಾಯಕರ ಅಭಿಪ್ರಾಯವನ್ನು ಕಾನೂನು ಆಯೋಗಕ್ಕೆ ಕಳಿಸಿಕೊಡಲಿದೆ.

LEAVE A REPLY

Please enter your comment!
Please enter your name here