Home Uncategorized ಒಡಿಶಾದಲ್ಲಿ ಬಾಲಕನ ಬರ್ಬರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು: ಓರ್ವನ ಬಂಧನ

ಒಡಿಶಾದಲ್ಲಿ ಬಾಲಕನ ಬರ್ಬರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು: ಓರ್ವನ ಬಂಧನ

31
0

ಕಟಕ್: ಒಡಿಶಾದ ಜಗತ್ಪುರ ಸಮೀಪದ ಗ್ರಾಮವೊಂದರಲ್ಲಿ 13 ವರ್ಷದ ಬಾಲಕನ ದಾರುಣ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.

ಜಗತ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪೂರ್ಬಕಚ್ಚಾ ಗ್ರಾಮದ ಕೊಳವೊಂದರ ಸಮೀಪ 13 ವರ್ಷದ ಬಾಲಕನ ಶವವು ರಕ್ತದ ಮಡುವಿನ ನಡುವೆ ಕತ್ತುಸೀಳಲಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಬಾಲಕನನ್ನು ಹತ್ಯೆಗೈದ ಆರೋಪಿಯನ್ನು ಪೂರ್ಬಕಚ್ಚಾ ಗ್ರಾಮದ ನಿವಾಸಿ ಜೋಗೆಂದ್ರ ಪಂಡಾ ಯಾನೆ ಬಾಬುಲಾ ಎಂದು ಗುರುತಿಸಲಾಗಿದೆ.

ಬಾಲಕನ ಮೇಲೆ ಸಲಿಂಗಕಾಮಕ್ಕೆ ಆರೋಪಿ ಬಾಬುಲಾ ಹಲವು ಸಲ ಯತ್ನಿಸಿದ್ದ. ಇದಕ್ಕೆ ಬಾಲಕ ಪ್ರತಿರೋಧವನ್ನು ತೋರಿಸುತ್ತಿದ್ದ. ಇದರಿಂದ ಕೆರಳಿದ ಬಾಬುಲ್ ಆತನನ್ನು ಹತ್ಯೆಗೈದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಬಾಬುಲ್ ತಪ್ಪೊಪ್ಪಿಕೊಂಡಿರುವುದಾಗಿಯೂ ಅವರು ಹೇಳಿದ್ದಾರೆ

ಡಿಸೆಂಬರ್ 16ರ ಬೆಳಗ್ಗಿನಿಂದೀಚೆಗೆ ಬಾಲಕನು ನಾಪತ್ತೆಯಾಗಿದ್ದ. ಕಲಿಕೆಯ ಮೇಲೆ ಗಮನಹರಿಸದೆ ಇರುವುದಕ್ಕಾಗಿ ತಂದೆ ಜಗನ್ನಾಥ ಬೆಹೆರಾ ಬೈದಿದ್ದರಿಂದ ನೊಂದ ಬಾಲಕ ಮನೆಯಿಂದ ಹೊರಹೋಗಿದ್ದನೆನ್ನಲಾಗಿದೆ.

ಡಿಸೆಂಬರ್ 17ರಂದು ಬಾಲಕನ ಶವವು ಗದ್ದೆಯೊಂದರ ಸಮೀಪದಲ್ಲಿರುವ ಕೊಳದ ಪಕ್ಕದಲ್ಲಿ ರಕ್ತದ ಮಡುವಿನ ನಡುವೆ ಕತ್ತುಸೀಳಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

LEAVE A REPLY

Please enter your comment!
Please enter your name here