Home Uncategorized ಕಂಬಳದಲ್ಲೂ ನಾರಿ ಶಕ್ತಿ ಪ್ರದರ್ಶನ, ಆಗಸ್ಟ್ ನಲ್ಲಿ ಮಹಿಳಾ ಜಾಕಿಗಳಿಗೆ ತರಬೇತಿ

ಕಂಬಳದಲ್ಲೂ ನಾರಿ ಶಕ್ತಿ ಪ್ರದರ್ಶನ, ಆಗಸ್ಟ್ ನಲ್ಲಿ ಮಹಿಳಾ ಜಾಕಿಗಳಿಗೆ ತರಬೇತಿ

19
0

ಕರಾವಳಿಯ ಸಾಂಪ್ರದಾಯಿಕ ಪುರುಷ ಪ್ರಧಾನ ಕ್ರೀಡೆಯಾಗಿರುವ ಕಂಬಳದಲ್ಲೂ ಈ ವರ್ಷದಿಂದ ಮೊದಲ ಬಾರಿಗೆ ಮಹಿಳಾ ಜಾಕಿಗಳು ಭಾಗವಹಿಸಲಿದ್ದು, ದಕ್ಷಿಣ ಕನ್ನಡ ಕಂಬಳ ಅಕಾಡೆಮಿ ಆಗಸ್ಟ್‌ನಲ್ಲಿ ಮಹಿಳೆಯರಿಗೆ ತರಬೇತಿ ನೀಡಲು ಸಿದ್ಧತೆ… ಮಂಗಳೂರು: ಕರಾವಳಿಯ ಸಾಂಪ್ರದಾಯಿಕ ಪುರುಷ ಪ್ರಧಾನ ಕ್ರೀಡೆಯಾಗಿರುವ ಕಂಬಳದಲ್ಲೂ ಈ ವರ್ಷದಿಂದ ಮೊದಲ ಬಾರಿಗೆ ಮಹಿಳಾ ಜಾಕಿಗಳು ಭಾಗವಹಿಸಲಿದ್ದು, ದಕ್ಷಿಣ ಕನ್ನಡ ಕಂಬಳ ಅಕಾಡೆಮಿ ಆಗಸ್ಟ್‌ನಲ್ಲಿ ಮಹಿಳೆಯರಿಗೆ ತರಬೇತಿ ನೀಡಲು ಸಿದ್ಧತೆ ನಡೆಸಿದೆ.

ಇತ್ತೀಚೆಗೆ, ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ತಿದ್ದುಪಡಿಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಮತ್ತು ಎತ್ತಿನಗಾಡಿ ಓಟದ ಜೊತೆಗೆ ಗೂಳಿ ಪಳಗಿಸುವ ಕ್ರೀಡೆಗಳಾದ ಜಲ್ಲಿಕಟ್ಟು ಮತ್ತು ಕಂಬಳಕ್ಕೆ ಅವಕಾಶ ನೀಡಿದೆ.

ಇದನ್ನು ಓದಿ: ವಿದೇಶಿಗರ ಕಣ್ಮನ ಸೆಳೆದ ‘ಮಂಗಳೂರು ಕಂಬಳ’

ಕಂಬಳ ಅಕಾಡೆಮಿ ಮಹಿಳೆಯರಿಗೆ ಕ್ರೀಡೆಯಲ್ಲಿ ತರಬೇತಿ ನೀಡಲು ಸಜ್ಜಾಗಿದ್ದು, 15 ರಿಂದ 20 ಮಹಿಳೆಯರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ ಮತ್ತು ಅವರಿಗೆ ಜಾಕಿ, ಧ್ವಜಧಾರಿಗಳಾಗಿ ತರಬೇತಿ ನೀಡಲು ಯೋಜಿಸಲಾಗಿದೆ ಎಂದು ಕಂಬಳ ನಿರೂಪಕ, ತೀರ್ಪುಗಾರ ಮತ್ತು ಜಿಲ್ಲಾ ಕಂಬಳ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಕಂಗಿನಮನೆ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

“ನಾವು ಅನೇಕ ವರ್ಷಗಳಿಂದ ನಮ್ಮ ಅಕಾಡೆಮಿಯಲ್ಲಿ ಪುರುಷರಿಗೆ ಜಾಕಿಗಳಾಗಿ ತರಬೇತಿ ನೀಡುತ್ತಿದ್ದೇವೆ. ಕಂಬಳದಲ್ಲಿ ಭಾಗವಹಿಸಲು ಬಯಸುವ ಮಹಿಳಾ ಉತ್ಸಾಹಿಗಳಿದ್ದಾರೆ. ವೈದ್ಯಕೀಯ ಮತ್ತು ಫಿಟ್ನೆಸ್ ಪರೀಕ್ಷೆಗಳಿಗೆ ಒಳಗಾದ ನಂತರ ಮಹಿಳೆಯರಿಗೆ ತರಬೇತಿ ನೀಡಲು ನಾವು ತರಬೇತುದಾರರ ಸಹಾಯವನ್ನು ಪಡೆಯುತ್ತೇವೆ. ಎಲ್ಲಾ ಸುರಕ್ಷತಾ ಮಾನದಂಡಗಳು ಮತ್ತು ಡ್ರೆಸ್ ಕೋಡ್‌ಗಳನ್ನು ಅನುಸರಿಸಲಾಗುವುದು” ಎಂದು ಕಂಗಿನಮನೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here