Home Uncategorized ಕಟ್ಟಡಕ್ಕೆ ಬೆಂಕಿ ಹಚ್ಚಿ 76 ಜನರ ಹತ್ಯೆ ಪ್ರಕರಣ; ಆರೋಪಿಯ ಬಂಧನ

ಕಟ್ಟಡಕ್ಕೆ ಬೆಂಕಿ ಹಚ್ಚಿ 76 ಜನರ ಹತ್ಯೆ ಪ್ರಕರಣ; ಆರೋಪಿಯ ಬಂಧನ

22
0

ಜೊಹಾನ್ಸ್ ಬರ್ಗ್: ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದ ಭೀಕರ ಅಗ್ನಿದುರಂತಕ್ಕೆ ಸಂಬಂಧಿಸಿದಂತೆ 76 ಮಂದಿಯ ಜೀವಂತ ದಹನದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಡ್ರಗ್ ಡೀಲರ್ ನ ಸೂಚನೆಯಂತೆ ಅಪಾರ್ಟ್ ಮೆಂಟ್ ನಲ್ಲಿ ಉಸಿರುಗಟ್ಟಿಸಿ ಒಬ್ಬನನ್ನು ಕೊಲೆ ಮಾಡಿ, ಆ ವ್ಯಕ್ತಿಯ ಶವವನ್ನು ವಿಲೇವಾರಿ ಮಾಡುವ ಸಲುವಾಗಿ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾಗಿ ಸಾರ್ವಜನಿಕ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡ ಬೆನ್ನಲ್ಲೇ ಆತನನ್ನು ಬಂಧಿಸಲಾಗಿದೆ.

ಇಡೀ ದಕ್ಷಿಣ ಆಫ್ರಿಕವನ್ನು ಇನ್ನೂ ದುಃಸ್ವಪ್ನವಾಗಿ ಕಾಡುತ್ತಿರುವ, 2023ರ ಆಗಸ್ಟ್ ನಲ್ಲಿ ನಡೆದ ಜೋಹಾನ್ಸ್ ಬರ್ಗ್ ಅಗ್ನಿದುರಂತದ ಕಾರಣಗಳನ್ನು ತಿಳಿಯಲು ನಡೆಸಿದ ಸಾರ್ವಜನಿಕ ವಿಚಾರಣೆ ವೇಳೆ ಈ ವ್ಯಕ್ತಿ ತಪ್ಪೊಪ್ಪಿಕೊಂಡಿದ್ದಾನೆ. ಆದರೆ  29 ವರ್ಷದ ಈ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿಲ್ಲ.

ಬೆಂಕಿ ಆಕಸ್ಮಿಕ ನಡೆದ ದಿನ ರಾತ್ರಿ ಕಟ್ಟಡದ ಬೇಸ್ ಮೆಂಟ್ ನಲ್ಲಿ ಆರೋಪಿ, ಮತ್ತೊಬ್ಬ ವ್ಯಕ್ತಿಯನ್ನು ಹೊಡೆದು, ಉಸಿರುಗಟ್ಟಿಸಿ ಸಾಯಿಸಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ. ಆತನ ದೇಹಕ್ಕೆ ಗ್ಯಾಸೋಲಿನ್ ಸುರಿದು ಬೆಂಕಿ ಹಚ್ಚಿದ್ದಾಗಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಗಳು ವಿವರಿಸಿವೆ.

ತಾನು ಡ್ರಗ್ ಬಳಸುತ್ತಿದ್ದೆ ಹಾಗೂ ಅದೇ ಕಟ್ಟಡದಲ್ಲಿ ವಾಸವಿದ್ದ ತಾಂಜಾನಿಯಾದ ಡ್ರಗ್ ಡೀಲರ್ ಒಬ್ಬರ ಸೂಚನೆಯಂತೆ ಈ ಕೃತ್ಯ ಎಸಗಿದ್ದಾಗಿ ಆತ ಸಾಕ್ಷ್ಯ ನುಡಿದಿದ್ದಾನೆ. ಆತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಶೀಘ್ರವೇ ಆತನನ್ನು ಜೋಹಾನ್ಸ್ಬರ್ಗ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

LEAVE A REPLY

Please enter your comment!
Please enter your name here