ಎರಡನೇ ಮದುವೆಯಾದ ಕೆಲವೇ ದಿನಗಳಲ್ಲಿ, ಭಾರತದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ತಪ್ಪು ಹೇಳಿಕೆಗಳನ್ನು ನೀಡುತ್ತಿರುವ ಅಭಿಮಾನಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಫೆಬ್ರುವರಿ 21 ರಂದು ದೆಹಲಿಯಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಶಿಖರ್ ಧವನ್ ತಮ್ಮ ಬಹುಕಾಲದ ಗೆಳತಿ ಸೋಫಿ ಶೈನ್ ಅವರೊಂದಿಗೆ ವಿವಾಹವಾದರು. ಭಾರತದ ಮಾಜಿ ಆರಂಭಿಕ ಆಟಗಾರ ತಮ್ಮ ವಿವಾಹದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ.
ಇದಾದ ಸ್ವಲ್ಪ ಸಮಯದ ನಂತರ, ಧವನ್ ಅವರ ವೈಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕಟ್ಟುಕಥೆಗಳು ಹರಡಲು ಪ್ರಾರಂಭಿಸಿದವು.
ಇದಕ್ಕೆ ಉತ್ತರವಾಗಿ, 40 ವರ್ಷದ ಆಟಗಾರ ಕೊನೆಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ‘ಅಸೂಕ್ಷ್ಮ ಮತ್ತು ಸುಳ್ಳು ಹೇಳಿಕೆಗಳನ್ನು’ ಹರಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ‘ನನ್ನ ವೈಯಕ್ತಿಕ ಜೀವನದ ಬಗ್ಗೆ ನಿರಾಶಾದಾಯಕ ಹೇಳಿಕೆಯನ್ನು ನೀಡುವ ಕೆಲವು ಪೋಸ್ಟ್ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ್ದೇನೆ. ನಾನು ಎಂದಿಗೂ ಹಿಂದಿನ ಜೀವನದ ಯಾವುದೇ ಹೊರೆಯನ್ನು ಹೊತ್ತುಕೊಂಡಿಲ್ಲ, ಅದು ಪಿಚ್ನಲ್ಲಿರಲಿ ಅಥವಾ ಹೊರಗಿರಲಿ. ನನ್ನ ಹಿಂದಿನ ಜೀವನವನ್ನು ಗೌರವಿಸುವಾಗ ಸಕಾರಾತ್ಮಕತೆಯ ಶಕ್ತಿಯನ್ನು ನಾನು ದೃಢವಾಗಿ ನಂಬುತ್ತೇನೆ’ ಎಂದು ಬರೆದಿದ್ದಾರೆ.
‘ಇದು ನನ್ನ ಜೀವನದಲ್ಲಿ ಹೊಸ ಅಧ್ಯಾಯ ಮತ್ತು ನನ್ನ ಅಭಿಮಾನಿಗಳು, ಸ್ನೇಹಿತರು, ಕುಟುಂಬ, ಹಿತೈಷಿಗಳು ಮತ್ತು ಮಾಧ್ಯಮದಿಂದ ನನಗೆ ದೊರೆತ ಪ್ರೀತಿ ಮತ್ತು ಆಶೀರ್ವಾದಗಳಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಸಾಮಾಜಿಕ ಮಾಧ್ಯಮದಲ್ಲಿ ಕ್ಲಿಕ್ ಬೈಟ್, ಅಸಂವೇದನಾಶೀಲ ಮತ್ತು ಸುಳ್ಳು ಹೇಳಿಕೆಗಳಿಂದ ನನ್ನ ಹೆಸರನ್ನು ಮಧ್ಯೆ ತರಬೇಡಿ ಎಂದು ನಾನು ಜನರನ್ನು ಬಲವಾಗಿ ಕೋರುತ್ತೇನೆ. ಪ್ರೀತಿ ಮತ್ತು ಸಕಾರಾತ್ಮಕತೆಯನ್ನು ಹರಡೋಣ’ ಎಂದು ಅವರು ಎಕ್ಸ್ನಲ್ಲಿ ಬರೆದಿದ್ದಾರೆ.
STATEMENT
I have come across some posts on social media attributing a disappointing statement about my personal life. I have never carried baggage from the past be it on the pitch or outside. I firmly believe in the power of positivity while respecting my past.
This is a new…
— Shikhar Dhawan (@SDhawan25) February 23, 2026
2025ರ ಮೇನಲ್ಲಿ ಸೋಫಿ ಶೈನ್ ಜೊತೆಗಿನ ಸಂಬಂಧವನ್ನು ಅಧಿಕೃತಗೊಳಿಸಿದ ಬಳಿಕ ಈ ವರ್ಷದ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಅಂತಿಮವಾಗಿ ಮೂರು ದಿನಗಳು ನಡೆದ ಸಮಾರಂಭದಲ್ಲಿ ವಿವಾಹವಾದರು. ಆದಾಗ್ಯೂ, ಈ ಜೋಡಿ ಎರಡು ವರ್ಷಗಳಿಂದ ಒಟ್ಟಿಗೆ ಇದ್ದಾರೆ ಮತ್ತು ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಭಾರತೀಯ ಕ್ರಿಕೆಟ್ ತಂಡದ ಸದಸ್ಯರ ಉಪಸ್ಥಿತಿಯಿಂದ ವಿವಾಹ ಸಮಾರಂಭಕ್ಕೆ ಮೆರುಗು ಮೂಡಿತು. ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ, ಅವರ ಪತ್ನಿ ರಿತಿಕಾ ಸಜ್ದೇಹ್, ಯುಜ್ವೇಂದ್ರ ಚಾಹಲ್, ಯುವರಾಜ್ ಸಿಂಗ್, ಸುರೇಶ್ ರೈನಾ ಮತ್ತು ಇತರ ಕೆಲವರು ಭಾಗವಹಿಸಿದರು.
