ಕ್ರಿಸ್ಮಸ್ ಹಬ್ಬ ಬಂದೇ ಬಿಟ್ಟಿತು. ಈ ಹಬ್ಬದ ಸಮಯದಲ್ಲಿ ಜನರು ಪ್ರೀತಿ ಪಾತ್ರರಿಗೆ ಕ್ರಿಸ್ಮಸ್ ಉಡುಗೊರೆಯನ್ನು ನೀಡಲು ಜೋರಾಗಿಯೆ ತಯಾರಿ ನಡೆಸಿದ್ದಾರೆ. ಆದರೆ ಇಲ್ಲಿ ಬಜೆಟ್ ತುಂಬಾ ಮುಖ್ಯವಾಗಿರುತ್ತದೆ. ತಾವು ಪ್ರೀತಿಸುವ ಜೀವಗಳಿಗೆ ಕಮ್ಮಿ ಬಜೆಟ್‌ನಲ್ಲಿ ಉತ್ತಮವಾಗಿರುವುದನ್ನು ಉಡುಗೊರೆಯಾಗಿ ನೀಡಲು ಬಯಸುವವರಿಗೆ ಫ್ಲಿಪ್‌ಕಾರ್ಟ್, ಮಿಂತ್ರಾ, ಅಮೆಜಾನ್ ಮುಂತಾದ ಇ-ಕಾಮರ್ಸ್ ಸೈಟ್‌ಗಳು ಉತ್ತಮ ಡೀಲ್‌ಗಳನ್ನು ನಿಮಗಾಗಿ ಪ್ರಸ್ತುತಪಡಿಸುತ್ತಿದೆ. ಅವುಗಳ ಪಟ್ಟಿ ಈ ಇಲ್ಲಿದೆ.
ಕ್ರಿಸ್ಮಸ್ ಕೊಡುಗೆಗಳು: ಅಮೆಜಾನ್
ಅಮೆಜಾನ್‌ನಲ್ಲಿ ‘ಎಂಡ್ ಆಫ್ ಸೀಝನ್ ಸೇಲ್’ ಲೈವ್ ಆಗಿದೆ. ಡಿಸೆಂಬರ್ 15ರಂದು ಲೈವ್ ಆಗಿರುವ ಮಾರಾಟವು ಡಿಸೆಂಬರ್ 21 ಅಂದರೆ ಇಂದಿನ ರವರೆಗೆ ನಡೆಯುತ್ತದೆ. ಈ ಸಮಯದಲ್ಲಿ ಖರೀದಿದಾರದು ಲ್ಯಾಪ್‌ಟಾಪ್, ಸ್ಮಾರ್ಟ್ ಫೋನ್, ಎಲೆಕ್ಟಾನಿಕ್ ಉಪಕರಣಗಳು, ಬಟ್ಟೆ, ಪೀಠೋಪಕರಣಗಳು ಮುಂತಾದ ಅನೇಕ ವಸ್ತುಗಳ ಮೇಲೆ ಹೆಚ್ಚಿನ ರಿಯಾಯಿತಿಗಳನ್ನು ಕಾಣಬಹುದು. ಇದಲ್ಲದೆ, ಅಮೆಜಾನ್, ಕ್ರಿಸ್ಮಸ್ ನೇಟಿವಿಟಿ ಸೆಟ್, ಕ್ರಿಸ್ಮಸ್ ಡೆಕೋರ್, ಕ್ರಿಸ್‌ಮಸ್ ಟ್ರೀ ಮತ್ತು ಪಾರ್ಟಿ ಸಪ್ಲೆಸ್‌ಗಳ ಮೇಲೆ ಶೇಕಡಾ 70% ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಕುಕ್ಕೀಸ್ ಮತ್ತು ಸ್ಯಾಕ್ಸ್ ಮೇಲೆ ಶೇಕಡಾ 30% ಹಾಗೂ ಇ-ಕಾಮರ್ಸ್ ಸೈಟ್ ಉಡುಪುಗಳ ಮೇಲೆ ಶೇಕಡಾ 60ರಷ್ಟು ರಿಯಾಯಿತಿ, ಪಾದರಕ್ಷೆಗಳ ಮೇಲೆ 70ರಷ್ಟು ರಿಯಾಯಿತಿಯನ್ನು ನೀಡುತ್ತಿದೆ.
ಕ್ರಿಸ್‌ಮಸ್ ಕೊಡುಗೆ; ಫ್ಲಿಪ್‌ಕಾರ್ಟ್
ಇ-ಕಾಮಸ್ ಸೈಟ್ ಫ್ಲಿಪ್‌ಕಾರ್ಟ್ ಡಿಸೆಂಬರ್ 19 ರಿಂದ 21 ರವರೆಗಿನ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ನಿಮ್ಮ ಕ್ರಿಸ್ಮಸ್ ಶಾಪಿಂಗ್‌ಗಾಗಿ ಅದ್ಭುತ ಕೊಡುಗೆಗಳನ್ನು ನೀಡುತ್ತಿದೆ. ಬಿಗ್ ಸೇವಿಂಗ್ ಡೇಸ್ 2022 ನಿಮಗೆ ಎಲೆಕ್ಟಾನಿಕ್, ಉಪಕರಣಗಳು, ಬಟ್ಟೆ ಹಾಗೂ ಇತರ ಉತ್ಪನ್ನಗಳ ಮೇಲೆ ಕೆಲವು ಉತ್ತಮ ಡೀಲ್‌ಗಳನ್ನು ತಂದಿದೆ. ಬಿಗ್ ಸೇವಿಂಗ್ ಡೇಸ್ ನಿಮಗೆ 12Pಒ, 8Pಒ, 4Pಒ ನಲ್ಲಿ ಅದ್ಭುತವಾತ ಹೊಸ ಡೀಲ್‌ಗಳನ್ನು ಪಡೆಯುವ ಅವಕಾಶವನ್ನು ನೀಡುತ್ತಿದೆ. ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಅನೇಕ ವಸ್ತುಗಳನ್ನು ಖರೀದಿಸುವ ಮೂಲಕ ಶಾಪರ್‌ಗಳು ಹೆಚ್ಚುವರಿ 5-10% ರಿಯಾಯಿತಿಯನ್ನು ಪಡೆಯಬಹುದು. ಹಾಗೂ ಅವರು ವಿಮಾನ ಟಿಕೆಟ್‌ಗಳು ಮತ್ತು ಔಷಧಿಗಳ ಮೇಲೆ ವಿಶೇಷ ಕೊಡುಗೆಗಳನ್ನು ಪಡೆಯಲು ಈ ಸಮಯವನ್ನು ಬಳಸಬಹುದು. ಆದ್ದರಿಂದ ಫ್ಲಿಪ್‌ಕಾರ್ಟ್ ಪ್ರಕಾರ ನಿಮ್ಮ ಫ್ಲೈಟ್ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವ ಮೂಲಕ ಬಿಗ್ ಸೇವಿಂಗ್ ಡೇಸ್‌ನಲ್ಲಿ ವಿಶೇಷ ರಿಯಾಯಿತಿಗಳನ್ನು ಪಡೆಯಬಹುದು.
ಇದನ್ನು ಓದಿ: ಕ್ರಿಸ್‌ಮಸ್, ಹೊಸ ವರ್ಷ ಆಚರಣೆ: ಪೊಲೀಸ್ ಗೈಡ್ ಲೈನ್ಸ್ ಪ್ರಕಟ: ಸಿಬ್ಬಂದಿ ನಿಯೋಜನೆ ಸಂಪೂರ್ಣ ಮಾಹಿತಿ, ಸಿಸಿ ಕ್ಯಾಮರಾ ಕಡ್ಡಾಯ
ಕ್ರಿಸ್ಮಸ್ ಕೊಡುಗೆ : ಮಿಂತ್ರಾ
ಕ್ರಿಸ್ಮಸ್‌ಗೆ ಮುಂಚಿತವಾಗಿ, ಆನೈನ್ ಶಾಪಿಂಗ್ ಸೈಟ್ ಮಿಂತ್ರಾ ಕೂಡಾ ಮಂಗಳವಾರದಿಂದ ವಿಶೇಷ ಮಾರಾಟವನ್ನು ನಡೆಸಲು ಸಿದ್ಧವಾಗಿದೆ. ಮಿಂತ್ರಾದ ವರ್ಷಾಂತ್ಯದ ಅಂದರೆ ಡಿಸೆಂಬರ್ 20 ರಿಂದ 24 ರವರೆಗೆ ಲೈವ್ ಆಗಿರುತ್ತದೆ ಮತ್ತು ಬಳಕೆದಾರರು ಶೇಕಡಾ 40 ರಿಂದ 70ರಷ್ಟು ರಿಯಾಯಿತಿಗಳನ್ನು ಪಡೆಯಬಹುದು. ಐಡಿಫ್‌ಸಿ ಫಸ್ಟ್ ಬ್ಯಾಂಕ್ ಹಾಗೂ ಫೆಡರಲ್ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳನ್ನು ಬಳಸಿಕೊಂಡು ಶಾಪರ್‌ಗಳು ಹೆಚ್ಚುವರಿ 10% ರಿಯಾಯಿತಿಯನ್ನು ಪಡೆಯಬಹುದು.
ತಂತ್ರಜ್ಞಾನ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
