Home Uncategorized ಕನಕಪುರ | ಮಹಿಳೆಯ ಮೇಲೆ ಕಾಡಾನೆ ದಾಳಿ: ತೀವ್ರ ಗಾಯ

ಕನಕಪುರ | ಮಹಿಳೆಯ ಮೇಲೆ ಕಾಡಾನೆ ದಾಳಿ: ತೀವ್ರ ಗಾಯ

32
0

ಕನಕಪುರ, ಜ.1: ರೇಷ್ಮೆ ಹುಳುಗಳಿಗೆ ಸೊಪ್ಪು ಹಾಕಲು ಹೋಗುತ್ತಿದ್ದ ಮಹಿಳೆಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ ತೀವ್ರ ಗಾಯಗೊಳಿಸಿರುವ ಘಟನೆ ಕನಕಪುರ ತಾಲೂಕಿನ ಕಸಬಾ ಹೋಬಳಿ ಬರಡನಹಳ್ಳಿ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.

ಬರಡನಹಳ್ಳಿ ಉಪ್ಪಾಕೆರೆದೊಡ್ಡಿ ಗ್ರಾಮದ ದುಂಡಮ್ಮ(30) ಗಾಯಗೊಂಡವರು. ಅವರು ಇಂದು ಮುಂಜಾನೆ 4 ಗಂಟೆ ಸುಮಾರಿಗೆ ರೇಷ್ಮೆ ಹುಳುಗಳಿಗೆ ಸೊಪ್ಪು ಹಾಕಲು ಹೋಗುತ್ತಿದ್ದಾಗ ಕಾಡಾಣೆ ಹಠಾತ್ ದಾಳಿ ನಡೆಸಿದೆ. ಇದರಿಂದ ಗುಂಡಮ್ಮರ ಎಡ ತೋಳು ಸಂಪೂರ್ಣ ಜಜ್ಜಿ ಹೋಗಿದೆ.

ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here