Home Uncategorized ಕಪ್ಪು ತೋಳುಪಟ್ಟಿ ಧರಿಸಿದ್ದಕ್ಕೆ ಉಸ್ಮಾನ್ ಖ್ವಾಜಾಗೆ ವಾಗ್ದಂಡನೆ: ಸಹ ಆಟಗಾರನ ಬೆಂಬಲಕ್ಕೆ ನಿಂತ ಪ್ಯಾಟ್‌ ಕಮಿನ್ಸ್

ಕಪ್ಪು ತೋಳುಪಟ್ಟಿ ಧರಿಸಿದ್ದಕ್ಕೆ ಉಸ್ಮಾನ್ ಖ್ವಾಜಾಗೆ ವಾಗ್ದಂಡನೆ: ಸಹ ಆಟಗಾರನ ಬೆಂಬಲಕ್ಕೆ ನಿಂತ ಪ್ಯಾಟ್‌ ಕಮಿನ್ಸ್

26
0

ಹೊಸದಿಲ್ಲಿ: ಪಾಕಿಸ್ತಾನದ ವಿರುದ್ಧದ ಬಾಕ್ಸಿಂಗ್‌ ಡೇ ಪಂದ್ಯದ ವೇಳೆ ಆಲಿವ್‌ ಎಸಳನ್ನು ಹಿಡಿದುಕೊಂಡಿರುವ ಕಪ್ಪು ಪಾರಿವಾಳದ ಚಿತ್ರವೊಂದನ್ನು ಹೊಂದಿದ ಸ್ಟಿಕ್ಕರ್‌ ಅನ್ನು ತಮ್ಮ ಬ್ಯಾಟ್‌ ಮತ್ತು ಶೂಗಳಲ್ಲಿ ಅಂಟಿಸಿ ಈ ಮೂಲಕ ಗಾಝಾದಲ್ಲಿನ ಜನರ ಸಮಸ್ಯೆಗಳತ್ತ ಗಮನ ಸೆಳೆಯಲು ಬಯಸುವ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಆಗಟಗಾರ ಉಸ್ಮಾನ್‌ ಖ್ವಾಜಾ ಅವರು ಮಾಡಿದ ಮನವಿಯನ್ನು ಐಸಿಸಿ ತಿರಸ್ಕರಿಸಿದರೂ ಆಸ್ಟ್ರೇಲಿಯ ಕಪ್ತಾನ ಪ್ಯಾಟ್‌ ಕಮಿನ್ಸ್ ತಮ್ಮ ಸಹೋದ್ಯೋಗಿಯ ಬೆಂಬಲಕ್ಕೆ ನಿಂತಿದ್ದಾರೆ.

ಇನ್ನೊಬ್ಬ ತಂಡದ ಆಟಗಾರ ಮಾರ್ನಸ್‌ ಲಾಬುಶೇನ್ ಅವರು ತಮ್ಮ ಬ್ಯಾಟ್‌ನಲ್ಲಿ ಗಿಡುಗನ ಚಿತ್ರ ಹೊಂದುವ ಮೂಲಕ ವೈಯಕ್ತಿಕ ಧಾರ್ಮಿಕ ಸಂದೇಶ ಬಿಂಬಿಸುವುದಕ್ಕೂ ಖ್ವಾಜಾ ಅವರು ತಮ್ಮ ಶೂ ಮತ್ತು ಬ್ಯಾಟ್‌ನಲ್ಲಿ ಆಲಿವ್‌ ಎಸಳು ಹಿಡಿದುಕೊಂಡ ಕಪ್ಪು ಪಾರಿವಾಳದ ಸ್ಟಿಕ್ಕರ್‌ ಹೊಂದುವುದರಲ್ಲಿ ತಮಗೆ ಯಾವುದೇ ವ್ಯತ್ಯಾಸ ಕಾಣಿಸುವುದಿಲ್ಲ ಎಂದು ಕಮಿನ್ಸ್ ಹೇಳಿದ್ದಾರೆ.

“ನಾವು ಉಝ್ಝಿ ಅವರನ್ನು ನಿಜವಾಗಿಯೂ ಬೆಂಬಲಿಸುತ್ತೇವೆ. ಅವರು ತಾವು ನಂಬಿರುವುದಕ್ಕಾಗಿ ಶ್ರಮಿಸುತ್ತಿದ್ದಾರೆ ಹಾಗೂ ಅದನ್ನು ಗೌರವಪೂರ್ವಕವಾಗಿ ಮಾಡುತ್ತಿದ್ದಾರೆ,” ಎಂದು ಕಮಿನ್ಸ್‌ ಹೇಳಿದರು.

“ಪಾಕಿಸ್ತಾನ ಮೂಲದವರಾದ ತಮ್ಮ 37 ವರ್ಷದ ಸಹೋದ್ಯೋಗಿಯನ್ನು ಸಂಪೂರ್ಣವಾಗಿ ಬೆಂಬಲಿಸಿದ ಕಮ್ಮಿನ್ಸ್‌ ಎಲ್ಲಾ ಜೀವಗಳು ಸಮಾನವಾಗಿವೆ, ಆದರೆ ನಿಯಮಗಳಿವೆ ಮತ್ತು ಐಸಿಸಿ ಅದಕ್ಕೆ ಒಪ್ಪುವುದಿಲ್ಲ ಎಂದಿದೆ. ನಾವು ಅದನ್ನು ಒಪ್ಪಬೇಕು,” ಎಂದು ಹೇಳಿದರು.

“ಸ್ವಾತಂತ್ರ್ಯವು ಮಾನವರ ಹಕ್ಕು” ಮತ್ತು ”ಎಲ್ಲಾ ಜೀವಗಳು ಸಮಾನ” ಎಂಬ ಸಂದೇಶಗಳನ್ನು ಫೆಲೆಸ್ತೀನಿ ಧ್ವಜದ ಬಣ್ಣಗಳಲ್ಲಿ ಆಪ್ಟಸ್‌ ಸ್ಟೇಡಿಯಂ ಪಂದ್ಯದಲ್ಲಿ ತಮ್ಮ ಬೂಟುಗಳಲ್ಲಿ ಹೊಂದುವುದಕ್ಕೆ ಅವಕಾಶ ನಿರಾಕರಿಸಲ್ಪಟ್ಟ ನಂತರ ಖ್ವಾಜಾ ಅವರು ಪರ್ತ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕಪ್ಪು ತೋಳುಪಟ್ಟಿ ಧರಿಸಿ ಆಡಿದ್ದರೂ ಐಸಿಸಿ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.

LEAVE A REPLY

Please enter your comment!
Please enter your name here