ಹೊಸದಿಲ್ಲಿ: ಹೊಸ ವರ್ಷದ ಮೊದಲ ದಿನ ಭಾರತವು ಜಗತ್ತಿನ ಅತ್ಯಂತ ಹಳೆಯ ನಿಗೂಢತೆಗಳಲ್ಲೊಂದಾದ ಕಪ್ಪು ರಂಧ್ರಗಳ ಬಗ್ಗೆ ಅನ್ವೇಷಿಸುವ ಮಿಷನ್ ಅನ್ನು ಆರಂಭಿಸಿದೆ. ತನ್ನ XPoSAT ಅಥವಾ ಎಕ್ಸ್-ರೇ ಪೊಲಾರಿಮೀಟರ್ ಉಪಗ್ರಹವನ್ನು ಶ್ರೀಹರಿಕೋಟಾದಿಂದ ಇಂದು ಇಸ್ರೋ ಉಡಾಯಿಸಿದೆ.
ಇಂದು ಬೆಳಿಗ್ಗೆ 9.32ಕ್ಕೆ ಸರಿಯಾಗಿ ಈ ಪೊಲಾರ್ ಸ್ಯಾಟಿಲೈಟ್ ಲಾಂಚ್ ವೆಹಿಕಲ್ ಉಡಾವಣೆ ಯಶಸ್ವಿಯಾಯಿತು. “ಪಿಎಸ್ಎಲ್ವಿ-ಸಿ58 ಯನ್ನು ನಿಗದಿತ ಕಕ್ಷೆಯಾದ 6 ಡಿಗ್ರೀ ಇಂಕ್ಲಿನೇಷನ್ನೊಂದಿಗಿನ 650 ಕಿಮೀ ಕಕ್ಷೆಯಲ್ಲಿ ಇರಿಸಲಾಗಿದೆ,” ಎಂದು ಇಸ್ರೋ ಪೋಸ್ಟ್ ಮಾಡಿದೆ. ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಈ ಯಶಸ್ವಿ ಉಡಾವಣೆ ಕುರಿತು ಘೋಷಿಸಿದ್ದಾರೆ.
ಈ ಮಿಷನ್ ಪೊಲಾರ್ ಉಪಗ್ರಹ ಉಡಾವಣೆ ವಾಹನದ 60ನೇ ಯಾನವಾಗಿದೆ. ಈ 260 ಟನ್ ರಾಕೆಟ್ ಅತ್ಯಾಧುನಿಕ ಖಗೋಳ ಒಬ್ಸರ್ವೇಟರಿಯನ್ನು ಹೊಂದಿದ್ದು ಅದು ಕಪ್ಪು ರಂಧ್ರಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳ ಅಧ್ಯಯನ ನಡೆಸಲಿದೆ.
ಅಮೆರಿಕಾದ ನಂತರ ಕಪ್ಪು ರಂಧ್ರಗಳ ಅಧ್ಯಯನಕ್ಕೆ ಒಬ್ಸರ್ವೇಟರಿ ಹೊಂದಿದ ಜಗತ್ತಿನ ಎರಡನೇ ರಾಷ್ಟ್ರ ಭಾರತವಾಗಲಿದೆ.
2024 lifted off majestically.
XPoSat health is normal.
Power generation has commenced. pic.twitter.com/v9ut0hh2ib
— ISRO (@isro) January 1, 2024
