ಬೆಂಗಳೂರು: ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ‘ಅಸಭ್ಯ ವರ್ತನೆ ನಿಷಿದ್ಧ’ ಎಂಬ ಫಲಕಕ್ಕೆ ವಿರೋಧ ವ್ಯಕ್ತಪಡಿಸಿ ಫಲಕದ ಮುಂದೆಯೇ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಒಬ್ಬರು ಪತಿಗೆ ಮುತ್ತಿಟ್ಟಿದ್ದು, ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಬ್ಬನ್ ಪಾರ್ಕ್ ಪ್ರೇಮಿಗಳ ಸಾರ್ವಜನಿಕ ಪ್ರೇಮ ಪ್ರದರ್ಶನಕ್ಕೆ (PDA) ಬ್ರೇಕ್ ಹಾಕಲು ಆಡಳಿತ ಮಂಡಳಿ ಹಲವು ಕಡೆಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಿದೆ.
ಈ ಫಲಕಕ್ಕೆ ಖ್ಯಾತ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಖ್ಯಾತಿ ಶ್ರೀ ಅವರು ವಿರೋಧ ವ್ಯಕ್ತಪಡಿಸಿದ್ದು, ವ್ಯಾಲೆಂಟೈನ್ಸ್ ಡೇ ದಿನದಂದು ನಿಯಮವನ್ನು ಪ್ರಶ್ನಿಸಿ ಫಲಕದ ಮುಂದೆಯೇ ಪತಿಗೆ ಮುತ್ತಿಟ್ಟಿದ್ದಾರೆ.
‘ನಾನು ನಿಮಗೆ ಕಬ್ಬನ್ ಪಾರ್ಕ್ನಲ್ಲಿರುವ ಒಂದು ಬೋರ್ಡ್ ತೋರಿಸುತ್ತೇನೆ. ಇಲ್ಲಿ ಅಸಭ್ಯ ವರ್ತನೆಗೆ ದಂಡ ವಿಧಿಸಲಾಗುವುದು ಎಂದು ಬರೆಯಲಾಗಿದೆ. ಇಲ್ಲಿ ತೋರಿಸಲಾಗಿರುವ ಚಿತ್ರವೇ ತಪ್ಪು. ಒಬ್ಬ ವ್ಯಕ್ತಿ ತನ್ನ ಪತ್ನಿ ಅಥವಾ ಪ್ರೇಯಸಿಯನ್ನು ಪ್ರೀತಿಸುವುದು ಅಥವಾ ಮುತ್ತಿಡುವುದು ಅಸಭ್ಯ ವರ್ತನೆಯಲ್ಲ. ಬದಲಿಗೆ ಬೇರೆಯವರನ್ನು ಚುಡಾಯಿಸುವುದು (Teasing), ಗಲಾಟೆ ಮಾಡುವುದು ಅಥವಾ ರೇಗಿಸುವುದು ನಿಜವಾದ ಅಸಭ್ಯ ವರ್ತನೆ. ಇದನ್ನು ನಾವು ಪ್ರಶ್ನಿಸಬೇಕು ಎಂದು ಹೇಳಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಲ್ಲಿ ಹಂಚಿಕೊಂಡಿದ್ದು, ವೀಡಿಯೋ ಭಾರೀ ವೈರಲ್ ಆಗಿದೆ. ಹಲವರು ಖ್ಯಾತಿ ಶ್ರೀ ಅವರ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ‘ಅಸಭ್ಯ ವರ್ತನೆ ನಿಷಿದ್ಧ’ ಎಂಬ ಫಲಕದ ಮುಂದೆಯೇ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಒಬ್ಬರು ತಮ್ಮ ಪತಿಗೆ ಮುತ್ತಿಟ್ಟಿದ್ದು ಈ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುವುದು ಅಸಭ್ಯವಲ್ಲ ಎಂದು ವಾದಿಸಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟೀಕೆಗಳು ವ್ಯಕ್ತವಾಗುತ್ತಿವೆ.… pic.twitter.com/9lzqzkeja5
— kannadaprabha (@KannadaPrabha) February 17, 2026
