Home Uncategorized ಕರಾಟೆ ಚಾಂಪಿಯನ್ ಶಿಪ್: ಚಿನ್ನದ ಪದಕ ಗೆದ್ದ ವಿದ್ಯಾರ್ಥಿಗೆ 50 ಸಾವಿರ ರೂ. ಬಹುಮಾನ ನೀಡಿದ...

ಕರಾಟೆ ಚಾಂಪಿಯನ್ ಶಿಪ್: ಚಿನ್ನದ ಪದಕ ಗೆದ್ದ ವಿದ್ಯಾರ್ಥಿಗೆ 50 ಸಾವಿರ ರೂ. ಬಹುಮಾನ ನೀಡಿದ ಸಚಿವ ಜಮೀರ್

43
0

ಇಂಡೋನೆಷ್ಯಾ ಜಕಾರ್ತಾದಲ್ಲಿ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಗಳಿಸಿದ ಮೊಹಮದ್ ತಾಹೀರ್ ಎಂಬ ವಿದ್ಯಾರ್ಥಿಗೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರು 50 ಸಾವಿರ ರೂ. ಬಹುಮಾನ ನೀಡಿದರು. ಬೆಂಗಳೂರು: ಇಂಡೋನೆಷ್ಯಾ ಜಕಾರ್ತಾದಲ್ಲಿ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಗಳಿಸಿದ ಮೊಹಮದ್ ತಾಹೀರ್ ಎಂಬ ವಿದ್ಯಾರ್ಥಿಗೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರು 50 ಸಾವಿರ ರೂ. ಬಹುಮಾನ ನೀಡಿದರು.

ಕೆಪಿಸಿಸಿ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಸಂದರ್ಭದಲ್ಲಿ ಪದಕ ಗೆದ್ದ ಮೊಹಮದ್ ತಾಹೀರ್‌ಗೆ ನಗದು ಬಹುಮಾನ ನೀಡಿ ಸನ್ಮಾನಿಸಿದರು.

ಕಳೆದ ತಿಂಗಳು ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೋಷಕರೊಂದಿಗೆ ಬಂದಿದ್ದ ತಾಹೀರ್, “ನಾನು ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದು, ಪಾಲ್ಗೊಳ್ಳಲು ಆರ್ಥಿಕ ಸಂಕಷ್ಟ ಎದುರಾಗಿದೆ. ನಮ್ಮ ತಂದೆ ಎಲೆಕ್ಟ್ರಿಶಿಯನ್ ಕೆಲಸ ಮಾಡುತ್ತಿದ್ದು ಅಷ್ಟು ಹಣ ಹೊಂದಿಸಲು ಆಗುತ್ತಿಲ್ಲ” ಎಂದು ಹೇಳಿದ್ದ. ಆಗ ಈ ವಿದ್ಯಾರ್ಥಿಗೆ ಸಚಿವರು 65 ಸಾವಿರ ರೂ. ವಿಮಾನಯಾನ ಟಿಕೆಟ್ ಮಾಡಿಸಿಕೊಟ್ಟಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಹೆಬ್ಬಾಳದ ಕ್ರೆಸೆಂಟ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ತಾಹೀರ್ ಚಿನ್ನದ ಪದಕ ಗೆದ್ದು ಬಂದಿದ್ದಾನೆ.

ಇದರಂತೆ ಚಿನ್ನದ ಪದಕ ಗೆದ್ದ ಬಳಿಕ ಸಚಿವರ ಬಳಿ ಬಂದಿದ್ದ ತಾಹೀರ್ ಪೋಷಕರು, ನೀವು ಸಹಾಯ ಮಾಡಿದ್ದಕ್ಕೆ ನಮ್ಮ ಮಗ ಸ್ಪರ್ಧೆಯಲ್ಲಿ ಭಾಗಿಯಾಗಿ ಬಂಗಾರಗ ಪದಕ ಗೆಲ್ಲುವಂತಾಯಿತು ಎಂದು ಕೃತಜ್ಞತೆ ಸಲ್ಲಿಸಿದರು.

ಈ ವೇಳೆ ವಿದ್ಯಾರ್ಥಿಗೆ 50 ಸಾವಿರ ನಗದು ಬಹುಮಾನ ನೀಡಿದ ಸಚಿವರು, ನಿಮ್ಮ ಮಗನ ಸಾಧನೆ ಹೆಮ್ಮೆಯ ವಿಷಯ ಎಂದು ಹೇಳಿದರು.

ವಿಶೇಷ ಚೇತನರ ಪರ ಕೆಲಸ ಮಾಡುವ ಗ್ಲೋಬಲ್ ಆರ್ಗನೈಜೇಶನ್ ಸಂಸ್ಥೆಗೆ ಸಚಿವರು ವೈಯಕ್ತಿಕವಾಗಿ ಎರಡು ಲಕ್ಷ ರೂ. ನೆರವನ್ನು ಇದೇ ಸಂದರ್ಭದಲ್ಲಿ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಚಂದ್ರಪ್ಪ, ಮಾಜಿ ಮೇಯರ್ ರಾಮಚಂದ್ರಪ್ಪ, ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶೇಖರ್, ಮುಖಂಡರಾದ ಜಿ. ಎ. ಬಾವಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here