Home Uncategorized ಕರುನಾಡಿನ ಹೆಮ್ಮೆಯ ಮೈಸೂರು ಪಾಕ್‌ಗೆ ಜಾಗತಿಕ ಮನ್ನಣೆ: ವಿಶ್ವದ ಸ್ಟ್ರೀಟ್​ ಫುಡ್​ನಲ್ಲಿ 14ನೇ ಸ್ಥಾನ!

ಕರುನಾಡಿನ ಹೆಮ್ಮೆಯ ಮೈಸೂರು ಪಾಕ್‌ಗೆ ಜಾಗತಿಕ ಮನ್ನಣೆ: ವಿಶ್ವದ ಸ್ಟ್ರೀಟ್​ ಫುಡ್​ನಲ್ಲಿ 14ನೇ ಸ್ಥಾನ!

26
0

ತನ್ನ ಹೆಸರಿನಲ್ಲಿಯೇ ಮೈಸೂರನ್ನು ಪ್ರತಿನಿಧಿಸುವ ಮೈಸೂರ್ ಪಾಕ ದೇಶ ವಿದೇಶಗಳಲ್ಲೂ ತನಕ ಹೆಸರು ವಾಸಿಯಾಗಿದೆ. ಇದೀಗ ಈ ಮೈಸೂರು ಪಾಕ್ ವಿಶ್ವದ ಸ್ಟ್ರೀಟ್ ಫುಡ್ನಲ್ಲಿ 14ನೇ ಸ್ಥಾನ ಪಡೆದುಕೊಂಡಿದೆ. ಮೈಸೂರ್ ಪಾಕ್ ನ ಸವಿಯನ್ನು ಬಲ್ಲವನೇ ಬಲ್ಲ ಎನ್ನುವ ಮಾತು ಈಗ ವಿಶ್ವವೇ ಬಲ್ಲದು ಎಂಬತಾಗಿದೆ. ನಮ್ಮ ರಾಜ್ಯದ ತಿಂಡಿಯೊಂದು ವಿಶ್ವದಲ್ಲೇ ಫೇಮಸ್ ಆಗಿರುವುದು ಎಲ್ಲರಿಗೂ ಖುಷಿ ತಂದಿದೆ. ತನ್ನ ಹೆಸರಿನಲ್ಲಿಯೇ ಮೈಸೂರನ್ನು ಪ್ರತಿನಿಧಿಸುವ ಮೈಸೂರ್ ಪಾಕ ದೇಶ ವಿದೇಶಗಳಲ್ಲೂ ತನಕ ಹೆಸರು ವಾಸಿಯಾಗಿದೆ. ಇದೀಗ ಈ ಮೈಸೂರು ಪಾಕ್ ವಿಶ್ವದ ಸ್ಟ್ರೀಟ್ ಫುಡ್ನಲ್ಲಿ 14ನೇ ಸ್ಥಾನ ಪಡೆದುಕೊಂಡಿದೆ.

ಮೈಸೂರ್ ಪಾಕ್ ನಮ್ಮ ಮೈಸೂರಿನಲ್ಲಿಯೇ ತಯಾರಾಗಿದ್ದು ಎನ್ನುವುದೇ ವಿಶೇಷ. ಮೈಸೂರು ಅರಮನೆಯ ಪಾಕಶಾಲೆಯಲ್ಲಿಯೇ ತಯಾರಾಗಿದ್ದು ಎನ್ನುವುದೇ ಕನ್ನಡಿಗರಿಗೆ ಸಂತೋಷದ ವಿಚಾರವಾಗಿದೆ.

ಈ ಮೈಸೂರುಪಾಕ್​ ವಿಶ್ವದ ಸ್ಟ್ರೀಟ್​ ಫುಡ್​ನಲ್ಲಿ 14ನೇ ಸ್ಥಾನ ಪಡೆದುಕೊಂಡಿದೆ. ಮೈಸೂರು ಅರಸರ ಕಾಲದಲ್ಲಿ ತಯಾರಾಗಿದ್ದ ಮೈಸೂರುಪಾಕ್, ಮೈಸೂರು ಅಂದ್ರೆ ಮೈಸೂರುಪಾಕ್ ಎನ್ನುವಷ್ಟು ಖ್ಯಾತಿ ಗಳಿಸಿದ್ದು, ಇದೀಗ ಜಾಗತಿಕ ಮಟ್ಟದ ಮನ್ನಣೆ ಪಡೆದುಕೊಂಡಿದೆ. 4.4 ರೇಟಿಂಗ್ ಪಡೆದ ಮೈಸೂರುಪಾಕ್, ಆನ್‌ಲೈನ್‌ ಮಾರ್ಕೆಟ್​ನಲ್ಲಿ ವಿಶ್ವದ 50 ತಿಂಡಿ ತಿನಿಸುಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಇನ್ನು ಕುಲ್ಫಿಗೆ 18ನೇ ಸ್ಥಾನ, ಕುಲ್ಫಿ ಫಲೂದಾಗೆ 32ನೇ ಸ್ಥಾನ ಸಿಕ್ಕಿದೆ.

ಟೇಸ್ಟ್ ಅಟ್ಲಾಸ್, ವಿಶ್ವದ ಬೆಸ್ಟ್ ಸ್ಟ್ರೀಟ್ ಫುಡ್ ಸ್ವೀಟ್​ನ ಟಾಪ್ 50​ ಪಟ್ಟಿ ಬಿಡುಗಡೆ ಮಾಡಿದ್ದು,  ಇದರಲ್ಲಿ ಮೈಸೂರುಪಾಕ್​ಗೆ 4.4 ರೇಟಿಂಗ್​ನಿಂದಿಗೆ 14ನೇ ಸ್ಥಾನ​ ಸಿಕ್ಕಿದೆ. ಇನ್ನು ಕುಲ್ಫಿಗೆ 4.3 ರೇಟಿಂಗ್​ ನೋಂದಿಗೆ 18ನೇ ಸ್ಥಾನ ನೀಡಲಾಗಿದೆ. ಫಲೂದಾ 4.0 ರೇಟಿಂಗ್​ನೊಂದಿಗೆ 32ನೇ ಸ್ಥಾನ ಪಡೆದುಕೊಂಡಿದೆ.

90 ವರ್ಷಗಳ ಹಿಂದೆ ಮೈಸೂರಿನ ಒಡೆಯರ್ ಸಾಮ್ರಾಜ್ಯದಲ್ಲಿ ಮುಖ್ಯ ಬಾಣಸಿಗರಾಗಿದ್ದ ಮಾದಪ್ಪ ಆಗಿನ ರಾಜ ಕೃಷ್ಣರಾಜ ಒಡೆಯರ್ ಊಟಕ್ಕೆ ಕೂತಾಗ ತಟ್ಟೆಯಲ್ಲಿ ಸಿಹಿ ತಿಂಡಿ ಇಲ್ಲದನ್ನು ಗಮನಿಸಿ ಅವಸರಲ್ಲಿ ಸಕ್ಕರೆ-ತುಪ್ಪ-ಕಡಲೆ ಹಿಟ್ಟಿನ ಮಿಶ್ರಣ ತಯಾರಿಸಿಕೊಟ್ಟು ಮಾಹರಾಜರಿಂದ ಭಾರೀ ಪ್ರಶಂಸೆ ಗಿಟ್ಟಿಸಿದ ಆ ತಿಂಡಿ ಇವತ್ತು ಜಗತ್ತಿನ 14 ನೇ ಸ್ವಾದಿಷ್ಟ ಸ್ಟ್ರೀಟ್ ಫುಡ್ ಎಂಬ ಪ್ರಖ್ಯಾತಿ ಪಡೆದಿದೆ . ಇದರೊಂದಿಗೆ ಮೈಸೂರು ಹಿರಿಮೆ ಮತ್ತಷ್ಟು ಹೆಚ್ಚಿದೆ.

ಮೈಸೂರು ಪಾಕ್‌ಗೆ ಜಾಗತಿಕ ಮನ್ನಣೆ ಸಿಕ್ಕಿರುವುದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ‘ನನ್ನ ತಂದೆಯವರು ಹಾಗೂ ಮನೆಗೆ ಬರುತ್ತಿದ್ದ ಸಂಬಂಧಿಕರು ಆಗಾಗ್ಗೆ ಮೈಸೂರು ಪಾಕ್ ತಂದಾಗ ಹಂಚಿ ತಿನ್ನುತ್ತಿದ್ದ ಬಾಲ್ಯದ ನೆನಪುಗಳು ಇನ್ನೂ ಇವೆ.

ಮೈಸೂರು ಅರಮನೆಯಲ್ಲಿ ಜನ್ಮತಾಳಿದ ಮೈಸೂರ್ ಪಾಕ್ ಇಂದು ಮನೆಮನೆಗಳಿಗೂ ತಲುಪುವುದರ ಹಿಂದೆ ಲಕ್ಷಾಂತರ ಬಾಣಸಿಗರ ಶ್ರಮ, ಕೌಶಲ್ಯ ಅಡಗಿದೆ. ಅವೆಲ್ಲರಿಗೂ ಇದರ ಶ್ರೇಯಸ್ಸು ಸಲ್ಲಬೇಕು,’ ಎಂದು ಖುಷಿ ಹಂಚಿಕೊಂಡಿದ್ದಾರೆ.
ಟೇಸ್ಟ್‌ ಅಟ್ಲಾಸ್‌ ಪ್ರಕಟಿಸಿರುವ ವಿಶ್ವದ ಟಾಪ್‌ 50 ಬೀದಿಬದಿ ಸಿಹಿ ತಿನಿಸುಗಳ ಪೈಕಿ ಮೈಸೂರ್‌ ಪಾಕ್‌ 14ನೇ ಸ್ಥಾನ ಪಡೆದಿರುವುದು ಕನ್ನಡಿಗರ ಹೆಮ್ಮೆ. ನನ್ನ ತಂದೆಯವರು ಹಾಗೂ ಮನೆಗೆ ಬರುತ್ತಿದ್ದ ಸಂಬಂಧಿಕರು ಆಗಾಗ್ಗೆ ಮೈಸೂರು ಪಾಕ್‌ ತಂದಾಗ ಹಂಚಿ ತಿನ್ನುತ್ತಿದ್ದ ಬಾಲ್ಯದ ನೆನಪುಗಳು ಹಾಗೇ ಇವೆ. ಮೈಸೂರು ಅರಮನೆಯಲ್ಲಿ ಜನ್ಮತಾಳಿದ ಮೈಸೂರ್… pic.twitter.com/ryGQe9HzxC— DK Shivakumar (@DKShivakumar) July 21, 2023

LEAVE A REPLY

Please enter your comment!
Please enter your name here