Home Uncategorized ಕರ್ನಾಟಕದಲ್ಲಿ ಐಪಿಎಸ್ ವಿಭಾಗದಲ್ಲಿ ಮೇಜರ್ ಸರ್ಜರಿ ಸಾಧ್ಯತೆ 

ಕರ್ನಾಟಕದಲ್ಲಿ ಐಪಿಎಸ್ ವಿಭಾಗದಲ್ಲಿ ಮೇಜರ್ ಸರ್ಜರಿ ಸಾಧ್ಯತೆ 

28
0

ಕರ್ನಾಟಕ ಪೊಲೀಸ್ ಇಲಾಖೆಗೆ ಈ ವಾರ ಪ್ರಮುಖ ಸರ್ಜರಿ ನಡೆಯುವ ಸಾಧ್ಯತೆ ಇದ್ದು, ಹಾಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪಡೆಯಲಿದ್ದಾರೆ. ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಗೆ ಈ ವಾರ ಪ್ರಮುಖ ಸರ್ಜರಿ ನಡೆಯುವ ಸಾಧ್ಯತೆ ಇದ್ದು, ಹಾಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪಡೆಯಲಿದ್ದಾರೆ.

ಎಡಿಜಿಪಿ ಪ್ರತಾಪ್ ರೆಡ್ಡಿ ಡಿಜಿಪಿ ಹುದ್ದೆಗೆ ಬಡ್ತಿ ದೊರೆಯಲಿದ್ದು,  ಡಿಜಿಪಿ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ , ಗೃಹರಕ್ಷಕರು, ನಾಗರಿಕ ರಕ್ಷಣಾ ಹಾಗೂ ಎಸ್ ಡಿಆರ್ ಎಫ್ ನ ಮುಖ್ಯಸ್ಥರಾಗಿರುವ ಅಮರ್ ಕುಮಾರ್ ಪಾಂಡೇ ನಿವೃತ್ತಿಪಡೆಯಲಿದ್ದಾರೆ. 

ನಗರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದ್ದು, ಹೋಮ್ ಗಾರ್ಡ್ಸ್, ಸಿವಿಲ್ ಡಿಫೆನ್ಸ್ ಹಾಗೂ ಎಸ್ ಡಿಆರ್ ಎಫ್ ಗೆ ಮತ್ತೋರ್ವ ಡಿಜಿಪಿಯನ್ನು ನೇಮಕ ಮಾಡಲಾಗುತ್ತದೆ. 

1998 ರ ಬ್ಯಾಚ್ ನ ಐಪಿಎಸ್ ಅಧಿಕಾರಿಗಳಾಗಿರುವ ಐವರು ಐಜಿಪಿ-ಸೌಮೇಂದು ಮುಖರ್ಜಿ (ಗುಪ್ತಚರ) ಚಂದ್ರಶೇಖರ್ ( ಸೆಂಟ್ರಲ್ ರೇಂಜ್) ಎಸ್ ರವಿ (ಪಿಸಿಎಎಸ್, ಗೃಹ, ಸರ್ಕಾರದ ಕಾರ್ಯದರ್ಶಿ) ಮನೀಷ್ ಖರ್ಬಿಕರ್ (ಕಲಬುರಗಿ ರೇಂಜ್) ಹಾಗೂ ಪಂಕಜ್ ಠಾಕೂರ್ ಅವರಿಗೆ ಎಡಿಜಿಪಿ ಹುದ್ದೆಗೆ ಪದೋನ್ನತಿ ದೊರೆಯಲಿದೆ.
 
2005 ಬ್ಯಾಚ್ ನ ಐಪಿಎಸ್ ಅಧಿಕಾರಿಗಳು ಹಾಗೂ ಡೆಪ್ಯುಟಿ ಇನ್ಸ್ಪೆಕ್ಟರ್ ಜನರ (ಡಿಐಜಿ) ರವಿಕಾಂತೇಗೌಡ (ಸಿಐಡಿ), ರಮಣ್ ಗುಪ್ತ (ಗುಪ್ತಚರ ವಿಭಾಗದ ಜಂಟಿ ಆಯುಕ್ತ) ಆರ್ ದಿಲೀಪ್, ಸಿದ್ದರಾಮಪ್ಪ (ಸಾರಿಗೆ ಆಯುಕ್ತ) ಬಾಲಕೃಷ್ಣ (ಹೋಮ್ ಗಾರ್ಡ್ಸ್) ಬಿಎಸ್ ಲೋಕೇಶ್ ಕುಮಾರ್ (ಬಳ್ಳಾರಿ ರೇಂಜ್), ಕೌಶಲೇಂದ್ರ ಕುಮಾರ್ (ಕೇಂದ್ರ ಪ್ರತಿನಿಧಿ, ಐಬಿ) ಹಾಗೂ ಅಭಿಷೇಕ್ ಗೋಯಲ್ (ಜಾರಿ ನಿರ್ದೇಶನಾಲಯ) ಅವರುಗಳಿಗೆ ಐಜಿಪಿ ಶ್ರೇಣಿಗೆ ಬಡ್ತಿ ನೀಡಲಾಗುತ್ತದೆ. 

2009 ರ ಬ್ಯಾಚ್ ನ ಐಪಿಎಸ್ ಅಧಿಕಾರಿಗಳಾದ ಎಂಎನ್ ಅನುಚೇತ್, ಶರಣಪ್ಪ, ರವಿ ಚನ್ನಣ್ಣನವರ್, ಬಿ ರಮೇಶ್, ಶಂತನು ಸಿನ್ಹಾ, ವಂಶಿ ಕೃಷ್ಣ, ಅಭಿನವ ಖರೆ, ಲದಾ ಮಾರ್ಟೀನ್, ಭೂಷಣ್ ಬೋರ್ಸೆ ಅವರುಗಳಿಗೆ ಡಿಐಜಿಪಿ ಶ್ರೇಣಿಗೆ ಬಡ್ತಿ ನೀಡಲಾಗುತ್ತದೆ.

LEAVE A REPLY

Please enter your comment!
Please enter your name here