Home Uncategorized ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸುತ್ತಿದೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ

ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸುತ್ತಿದೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ

13
0

ಕೊಪ್ಪಳ: ಕರ್ನಾಟಕದ ಅಭಿವೃದ್ಧಿಗೆ (development) ನಮ್ಮ ಸರ್ಕಾರ ಶ್ರಮಿಸುತ್ತಿದೆ. ರಾಜ್ಯದಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಕರ್ನಾಟಕ ದೇಶದಲ್ಲಿ ಯೋಜನೆ ಜಾರಿಗೊಳಿಸಿದ ಮೊದಲ ರಾಜ್ಯವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (Jp Nadda) ಹೇಳಿದರು. ಜಿಲ್ಲೆಯಲ್ಲಿ ಬಿಜೆಪಿ ಕಚೇರಿ ಉದ್ಘಾಟಿಸಿ ಅವರು ಮಾತನಾಡಿ, ಮಹಿಳೆಯರ ಕಲ್ಯಾಣಕ್ಕಾಗಿ ಹಲವು ಯೋಜನೆ ಜಾರಿಗೆ ತಂದಿದ್ದೇವೆ. ಆಯುಷ್ಮಾನ್ ಯೋಜನೆ ಮೂಲಕ ಬಡವರಿಗೆ ಅನುಕೂಲವಾಗಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ರಾಜ್ಯದಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಜಾರಿಗೆ ತಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಿದೆ. ಶೋಷಿತರು, ಬಡವರು, ಮಹಿಳೆಯರು, ರೈತರು, ದಲಿತರ ಕಲ್ಯಾಣ ಸಮಾಜದ ಎಲ್ಲರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಜೆ.ಪಿ.ನಡ್ಡಾ ಹೇಳಿದರು.

ಕೊಪ್ಪಳ ಜಿಲ್ಲೆ ಸಾಂಸ್ಕೃತಿಕವಾಗಿ ಪವಿತ್ರ ಭೂಮಿ. ಯಡಿಯೂರಪ್ಪನವರಂತಹ ಕಾರ್ಯಕರ್ತರಿಂದ ಪಕ್ಷ ಬೆಳೆದಿದೆ. ಇಂದು 10 ಜಿಲ್ಲಾ ಕೇಂದ್ರಗಳಲ್ಲಿ ಕಚೇರಿ ಉದ್ಘಾಟಿಸಲಾಗಿದೆ. ಶ್ರೀನಗರದ ಲಾಲ್​ಚೌಕ್​ನಲ್ಲೂ ತ್ರಿವರ್ಣ ಧ್ವಜ ಹಾರಿಸಿದ್ದೇವೆ.
ಇದು ಬಿಜೆಪಿ ಕಾರ್ಯಕರ್ತರ ಶಕ್ತಿ. ಕೊರೊನಾ ಸೋಂಕಿನಿಂದ ಯುರೋಪ್​ ಇನ್ನೂ ಮುಕ್ತವಾಗಿಲ್ಲ. ಆದರೆ ಭಾರತ ಕೊವಿಡ್​ ವಿರುದ್ಧ ಹೋರಾಟ ಮಾಡಿ ಗೆದ್ದಿದೆ. ದೇಶದಲ್ಲಿ ಲಸಿಕೆ ನೀಡುವ ಕಾರ್ಯ ಮೋದಿ ಸರ್ಕಾರ ಮಾಡಿದೆ ಎಂದರು.

ಇದನ್ನೂ ಓದಿ: ಅಂಜನಾದ್ರಿ ಕ್ಷೇತ್ರ ಅಭಿವೃದ್ಧಿಗೆ 140 ಕೋಟಿ ರೂ. ಅನುದಾನ: ಸಿಎಂ ಬೊಮ್ಮಾಯಿ

ರಾಹುಲ್​ ಗಾಂಧಿ ವಿರುದ್ಧ ಜೆ.ಪಿ.ನಡ್ಡಾ ವಾಗ್ದಾಳಿ

ಭಾರತ್​ ಜೋಡೋ ಅಲ್ಲ, ತೋಡೋ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್​​ನ ಹಿಂದಿನ ಇತಿಹಾಸ ಮೆಲುಕು ಹಾಕಿದ್ರೆ ತಿಳಿಯುತ್ತೆ. ದೇಶ ವಿರೋಧಿ ಚಟುವಟಿಕೆ ನಡೆಸುವವರ ಜೊತೆ ಮತ್ತು ಜೆಎನ್​ಯು ವಿವಿಯಲ್ಲಿ ರಾಹುಲ್​ ಗಾಂಧಿ ಭಾಗಿಯಾಗುತ್ತಾರೆ ಎಂದು ಸಂಸದ ರಾಹುಲ್​ ಗಾಂಧಿ ವಿರುದ್ಧ ಜೆ.ಪಿ.ನಡ್ಡಾ ವಾಗ್ದಾಳಿ ಮಾಡಿದರು.

ನಮ್ಮಲ್ಲಿ ಯಾವುದೇ ಸಮಸ್ಯೆಯಿಲ್ಲ ಎಲ್ಲರೂ ಒಗ್ಗಟ್ಟಾಗಿದ್ದೇವೆ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ 

ಇನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದು, ನಮ್ಮಲ್ಲಿ ಯಾವುದೇ ಸಮಸ್ಯೆಯಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಸಿಎಂ‌ ಜೊತೆ ಒಟ್ಟಾಗಿ ಪ್ರಚಾರಕ್ಕೆ ಹೋಗುತ್ತೇವೆ. ರಾಜ್ಯದಲ್ಲಿ ವಾತಾವರಣ ನಮ್ಮ ಪರವಾಗಿದೆ. ರಾಜ್ಯದಲ್ಲಿ ಪ್ರಚಾರಕ್ಕೆ ಪ್ರಧಾನಿ ಮೋದಿ ಐದಾರು ಭಾರಿ ರಾಜ್ಯಕ್ಕೆ ಬರಲಿದ್ದಾರೆ. ಅಮಿತ್ ಶಾ ಕೂಡಾ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರು ಹಗಲು ಕನಸು ಕಾಣುತ್ತಿದ್ದಾರೆ ಅವರದ್ದು ತಿರುಕನ ಕನಸು.

ಮಂಗಳೂರು ಬ್ಲಾಸ್ಟ್ ಪ್ರಕರಣ ಕಾಂಗ್ರೆಸ್ ನಾಯಕರಿಗೆ ಹಗರುವಾಗಿ ಮಾತನಾಡುವುದು ಅವರ ಅಭ್ಯಾಸವಾಗಿದೆ. ಬೇಜವಾಬ್ದಾರಿಯಿಂದ ಮಾತನಾಡುವುದು ಹವ್ಯಾಸವಾಗಿದೆ. ಅಂಜನಾದ್ರಿ ಬೆಟ್ಟ ಅಭಿವೃದ್ಧಿ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಎನೆಲ್ಲಾ ಅಭಿವೃದ್ಧಿ ಕಾರ್ಯ ಏನೂ ಮಾಡಬೇಕು ಅದನ್ನ ಮಾಡುತ್ತೇವೆ. ತೀರ್ಥ ಕ್ಷೇತ್ರಗಳನ್ನ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದರು.

ಬಿ.ಎಸ್​.ಯಡಿಯೂರಪ್ಪರನ್ನು ಹಾಡಿಹೊಗಳಿದ ಸಿಎಂ ಬೊಮ್ಮಾಯಿ

ರೈತ ಪರ ಹೋರಾಟಗಾರ, ಅಭಿವೃದ್ಧಿ ಹರಿಕಾರ ಯಡಿಯೂರಪ್ಪ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಹಳ್ಳಿಹಳ್ಳಿಯಲ್ಲೂ ಜನ ಬಿಜೆಪಿ ಪರ ನಿಲ್ಲಲು ಬಿಎಸ್​ವೈ ಕಾರಣ‌. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಅಲೆ ಇದೆ. 35 ವರ್ಷಗಳಲ್ಲಿ ಬಿಜೆಪಿ ಹಂತಹಂತವಾಗಿ ಬೆಳೆದು ನಿಂತಿದೆ. ಅದಕ್ಕೆ ಯಡಿಯೂರಪ್ಪನವರ ಪರಿಶ್ರಮವನ್ನು ಮರೆಯುವಂತಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

LEAVE A REPLY

Please enter your comment!
Please enter your name here