Home Uncategorized ಕರ್ನಾಟಕ ವಿಧಾನಸಭೆ ಚುನಾವಣೆ: 122 ಕೋಟಿ ರೂ ಇದ್ದ ರಮೇಶ್ ಜಾರಕಿಹೊಳಿ ಆಸ್ತಿ ಕೇವಲ 49.25...

ಕರ್ನಾಟಕ ವಿಧಾನಸಭೆ ಚುನಾವಣೆ: 122 ಕೋಟಿ ರೂ ಇದ್ದ ರಮೇಶ್ ಜಾರಕಿಹೊಳಿ ಆಸ್ತಿ ಕೇವಲ 49.25 ಕೋಟಿ ರೂಗೆ ಕುಸಿತ!

32
0

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಗೋಕಾಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಳೆ ಅವರ ಆಸ್ತಿ ಮೌಲ್ಯದಲ್ಲಿ ಬರೊಬ್ಬರಿ 72.25 ಕೋಟಿ ರೂ ಮೌಲ್ಯ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಬೆಳಗಾವಿ: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಗೋಕಾಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಳೆ ಅವರ ಆಸ್ತಿ ಮೌಲ್ಯದಲ್ಲಿ ಬರೊಬ್ಬರಿ 72.25 ಕೋಟಿ ರೂ ಮೌಲ್ಯ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.

ಹೌದು.. ಗೋಕಾಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಆಸ್ತಿ ಕಳೆದ ಐದು ವರ್ಷಗಳಲ್ಲಿ 72.25 ಕೋಟಿ ಕಡಿಮೆಯಾಗಿದೆ. ಗುರುವಾರ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, 2018ರಲ್ಲಿ 122 ಕೋಟಿ ಆಸ್ತಿ ಘೋಷಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಅವರು, ಈ ಬಾರಿ 49.25 ಕೋಟಿ ಆಸ್ತಿ ಹೊಂದಿದ್ದಾಗಿ ಪ್ರಮಾಣ ಪತ್ರದಲ್ಲಿ ನಮೂದಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಇಳಿಕೆಗೆ ಕಾರಣ ಏನು ಎಂದು ಅವರು ನಮೂದಿಸಿಲ್ಲ.

ಇದನ್ನೂ ಓದಿ: ಕನಕಪುರ ಕ್ಷೇತ್ರದಿಂದ ‘ಬಂಡೆ’ ಸ್ಪರ್ಧೆಗೆ ಅಡ್ಡಿ ಸಾಧ್ಯತೆ; ಡಿಕೆ ಶಿವಕುಮಾರ್‌ಗೆ ನಾಮಪತ್ರ ತಿರಸ್ಕೃತವಾಗುವ ಭೀತಿ

2018ರಲ್ಲಿ ರಮೇಶ ತಮ್ಮ ಜೊತೆಗೆ, ಪತ್ನಿ ಜಯಶ್ರೀ, ಇಬ್ಬರು ಪುತ್ರರಾದ ಅಮರನಾಥ ಹಾಗೂ ಸಂತೋಷ ಅವರ ಆಸ್ತಿ ವಿವರ ನೀಡಿದ್ದರು. ಆದರೆ, ಈ ಬಾರಿ ತಮ್ಮ, ಪತ್ನಿ ಹಾಗೂ ಒಬ್ಬ ಪುತ್ರನ ಆಸ್ತಿ ಮಾತ್ರ ಘೋಷಿಸಿದ್ದಾರೆ. ಇನ್ನೊಬ್ಬ ಪುತ್ರ ಸಂತೋಷ ಆಸ್ತಿ ವಿವರ ನೀಡಿಲ್ಲ. 2013ರ ಚುನಾವಣೆ ವೇಳೆ ಒಟ್ಟು 57 ಕೋಟಿ ಆಸ್ತಿ ಘೋಷಿಸಿದ್ದರು. ಈಗ ಘೋಷಿಸಿದ ಆಸ್ತಿ ಅದಕ್ಕಿಂತಲೂ ಕಡಿಮೆಯಾಗಿದೆ.

ಕುಟುಂಬದಿಂದ ಕಿರಿಯ ಪುತ್ರ ಪ್ರತ್ಯೇಕವಾಸ
ಇನ್ನು ಮೂಲಗಳ ಪ್ರಕಾರ ‘ರಮೇಶ ಅವರ ಕುಟುಂಬದ ಒಡೆತನದ ಸಕ್ಕರೆ ಕಾರ್ಖಾನೆಗಳನ್ನು ನಿರ್ವಹಿಸುತ್ತಿರುವ ಕಿರಿಯ ಪುತ್ರ ಸಂತೋಷ ಜಾರಕಿಹೊಳಿ ಈಗ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆಸ್ತಿ ಮೊತ್ತ ಕಡಿಮೆ ಆಗಲು ಇದೂ ಒಂದು ಕಾರಣವಾಗಿರಬಹುದು. ಅಮರನಾಥ ಅವರು ತಮ್ಮ ಹೆತ್ತವರೊಂದಿಗೆ ವಾಸಿಸುತ್ತಿದ್ದಾರೆ. ಸಹೋದರರ ನಡುವೆ ಆಸ್ತಿ ಹಂಚಿಕೆಯಾಗಿರುವ ಸಾಧ್ಯತೆ ಇದೆ’ ಎಂದು ಜಾರಕಿಹೊಳಿ ಕುಟುಂಬದ ಆಪ್ತರಾದ ವಕೀಲರೊಬ್ಬರು ಹೇಳಿದರು.

ಇದನ್ನೂ ಓದಿ: ಲಿಂಗಾಯತರನ್ನು ಕಾಂಗ್ರೆಸ್ ಸಿಎಂ ಮಾಡಲಿ, ‘ಯೂಸ್ ಅಂಡ್ ಥ್ರೋ’ ತಂತ್ರ ನಿಲ್ಲಿಸಲಿ: ವಿ. ಸೋಮಣ್ಣ

ಲೈಂಗಿಕ ಪ್ರಕರಣ: 
ಈ ಅಫಿಡವಿಟ್‌ನಲ್ಲಿ ರಮೇಶ ಜಾರಕಿಹೊಳಿ ತಮ್ಮ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪದ ಒಂದು ಕ್ರಿಮಿನಲ್ ಮೊಕದ್ದಮೆ ಇದೆ ಎಂದು ಉಲ್ಲೇಖಿಸಿದ್ದಾರೆ. ವಿಶೇಷ ತನಿಖಾ ತಂಡವು ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿಯಾದರೂ, ಪ್ರತಿವಾದಿಗಳು ಎಸ್‌ಐಟಿಯ ಸಂವಿಧಾನವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ ಎಂದು ಬರೆದು ಕೊಂಡಿದ್ದಾರೆ.
 

LEAVE A REPLY

Please enter your comment!
Please enter your name here