Home Uncategorized ಕರ್ಪೂರಿ ಠಾಕೂರ್ ʼಭಾರತ ರತ್ನ ಪ್ರಶಸ್ತಿʼಗೆ ಅತ್ಯಂತ ಅರ್ಹ ವ್ಯಕ್ತಿ: ಸಿಎಂ ಸಿದ್ದರಾಮಯ್ಯ

ಕರ್ಪೂರಿ ಠಾಕೂರ್ ʼಭಾರತ ರತ್ನ ಪ್ರಶಸ್ತಿʼಗೆ ಅತ್ಯಂತ ಅರ್ಹ ವ್ಯಕ್ತಿ: ಸಿಎಂ ಸಿದ್ದರಾಮಯ್ಯ

55
0

ಬೆಂಗಳೂರು: ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರು ಭಾರತ ರತ್ನ ಪ್ರಶಸ್ತಿಗೆ ಅತ್ಯಂತ ಅರ್ಹ ವ್ಯಕ್ತಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ಪೂರಿ ಠಾಕೂರ್ ಅವರಿಗೆ  ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿರುವ ಬಗ್ಗೆ ಪ್ರತಿಕ್ರಿಯಸಿರುವ ಸಿಎಂ ಅವರು, ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕರಾಗಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿರುವುದು ನನಗೆ ಅತೀವ ಸಂತಸ ಉಂಟುಮಾಡಿದೆ. ಎಪ್ಪತ್ತರ ದಶಕದಲ್ಲಿಯೇ ಕರ್ನಾಟಕದ ಮಾದರಿಯಲ್ಲಿ ಬಿಹಾರದಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ಕಲ್ಪಿಸಿದ್ದ ಕರ್ಪೂರಿ ಠಾಕೂರ್ ಅವರನ್ನು ‘’ಬಿಹಾರದ ದೇವರಾಜ ಅರಸು’’ ಎಂದು ಬಣ್ಣಿಸಲಾಗುತ್ತದೆ.

ಹಿಂದುಳಿದ ಸವಿತಾ ಸಮಾಜಕ್ಕೆ ಸೇರಿರುವ ಕರ್ಪೂರಿ ಠಾಕೂರ್ ಅವರು ಜಾತಿಗ್ರಸ್ತ ಬಿಹಾರ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇ ಅವರ ಜನಪ್ರಿಯತೆಗೆ ಸಾಕ್ಷಿ. ಭಾರತ ರತ್ನ ಪ್ರಶಸ್ತಿಗೆ ಅವರು ಅತ್ಯಂತ ಅರ್ಹರು. ಅವರಿಗೆ ನನ್ನ ಗೌರವಪೂರ್ವಕ ನಮನಗಳು ಎಂದು ಟ್ವೀಟ್‌ ಮಾಡಿದ್ದಾರೆ.

LEAVE A REPLY

Please enter your comment!
Please enter your name here