Home ಕರ್ನಾಟಕ ಕಲಬುರಗಿ | ರಥೋತ್ಸವದ ವೇಳೆ ಅವಘಡ‌ : ರಥದ ಚಕ್ರಕ್ಕೆ ಸಿಲುಕಿ ಹೋಂಗಾರ್ಡ್ ಮೃತ್ಯು

ಕಲಬುರಗಿ | ರಥೋತ್ಸವದ ವೇಳೆ ಅವಘಡ‌ : ರಥದ ಚಕ್ರಕ್ಕೆ ಸಿಲುಕಿ ಹೋಂಗಾರ್ಡ್ ಮೃತ್ಯು

28
0

ಕಲಬುರಗಿ : ಇಲ್ಲಿನ ಶರಣಬಸವೇಶ್ವರರ ಉಚ್ಚಾಯಿ ರಥೋತ್ಸದ ಸಂದರ್ಭದಲ್ಲಿ ರಥದ ಚಕ್ರದಡಿ ಸಿಲುಕಿ ಗೃಹ ರಕ್ಷಕ ದಳದ ಸಿಬ್ಬಂದಿ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ.

ಇಟಗಾ ಗ್ರಾಮದ ನಿವಾಸಿಯಾಗಿರುವ ರಾಮು ಸಿದ್ದಪ್ಪ ವಾಲಿ (31) ಮೃತಪಟ್ಟಿದ್ದು, ಎಚ್.ಜಿ ಅಶೋಕ್ ರೆಡ್ಡಿ ಮತ್ತು ಓರ್ವ ಬಾಲಕನ ಕಾಲಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.

ಜನಸಾಗರದ ನಡುವೆ ನಡೆಯುತ್ತಿರುವ ರಥೋತ್ಸವ ಕಾರ್ಯಕ್ರಮದಲ್ಲಿ ಚಿಟಗುಪ್ಪಾ ಘಟಕದ ಮೃತ ರಾಮು ಕಲಬುರಗಿ ಬಂದೋಬಸ್ತ್ ನಲ್ಲಿ ನಿಯೋಜನೆ ಗೊಂಡಿದ್ದರು.

LEAVE A REPLY

Please enter your comment!
Please enter your name here