Home Uncategorized ಕಲಬುರಗಿ: ಹವಾ ಮಲ್ಲಿನಾಥ್ ಸ್ವಾಮಿಗೆ ನ್ಯಾಯಾಂಗ ಬಂಧನ

ಕಲಬುರಗಿ: ಹವಾ ಮಲ್ಲಿನಾಥ್ ಸ್ವಾಮಿಗೆ ನ್ಯಾಯಾಂಗ ಬಂಧನ

35
0

ಕಲಬುರಗಿ: ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಿರಗುಡಿಯ ಹವಾ ಮಲ್ಲಿನಾಥ್ ಮಹಾರಾಜ್ ಅವರಿಗೆ ಜಿಲ್ಲಾ ಎರಡನೇ ಸತ್ರ ನ್ಯಾಯಾಲಯವು 12 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿದೆ.

ಕಳೆದ ಆರು ವರ್ಷಗಳ ಹಿಂದಿನ ಅಟ್ರಾಸಿಟಿ ಮತ್ತು ಜೀವ ಬೆದರಿಕೆ ಪ್ರಕರಣದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದ ಆದೇಶವನ್ನು ಹೊರಡಿಸಲಾಗಿದೆ. ನಗರದ ಎಂ.ಬಿ. ನಗರ ಪೋಲಿಸ್ ಠಾಣೆಯಲ್ಲಿ ಕಳೆದ 2017ರಲ್ಲಿ ಹವಾ ಮಲ್ಲಿನಾಥ್ ಮಹಾರಾಜ್ ಹಾಗೂ ಅವರ ಅಕ್ಕನ ಮಗ ಪ್ರಕಾಶ್ ಅವರ ಮೇಲೆ ಅಟ್ರಾಸಿಟಿ ಸೇರಿ 498/ಅ, 506, 109, 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಪ್ರಕಾಶ್ ಮೊದಲನೇ ಆರೋಪಿಯಾಗಿದ್ದರೆ, ಹವಾ ಮಲ್ಲಿನಾಥ್ ಮಹಾರಾಜ್ ಅವರು ಎರಡನೇ ಆರೋಪಿಗಯಾಗಿದ್ದಾರೆ. ನ್ಯಾಯಾಲಯಕ್ಕೆ ಹಾಜರಾಗುವಂತೆ ಆರೋಪಿಗಳಿಗೆ ನೋಟಿಸ್ ನೀಡಿದರೂ ಸಹ ಸತತ ಗೈರಾಗಿದ್ದ ಹಿನ್ನೆಲೆಯಲ್ಲಿ ಬಂಧನಕ್ಕೆ ವಾರೆಂಟ್ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.

ಹವಾ ಮಲ್ಲಿನಾಥ್ ಮಹಾರಾಜ್ ಅವರು ಸೋಮವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಶರಣಾದರು. ಸದ್ಯ ದೈಹಿಕ ಅಸ್ವಸ್ಥದ ಹಿನ್ನೆಲೆಯಲ್ಲಿ ಹವಾ ಮಲ್ಲಿನಾಥ್ ಮಹಾರಾಜರು ಆಸ್ಪತ್ರೆಗೆ ದಾಖಲಾಗಿದ್ದು, ಮಂಗಳವಾರ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here