ಹಿರಿಯಡ್ಕ, ಮಾ.18: ಗೂಗಲ್ ಪೇ ಕಸ್ಟಮ್‌ಕೇರ್ ಹೆಸರಿನಲ್ಲಿ ಸಾವಿರಾರು ರೂ. ವಂಚಿಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಮಾರ್ ಎಂಬವರು ಮಾ.14ರಂದು ತನ್ನ ವ್ಯವಹಾರದ 6000ರೂ. ಹಣವನ್ನು ಗೂಗಲ್ ಪೇನಲ್ಲಿ ಕೈತಪ್ಪಿನಿಂದ ಬೇರೊಂದು ನಂಬರಿಗೆ ಕಳುಹಿಸಿದ್ದು, ಈ ಸಂಬಂಧ ಗೂಗಲ್‌ನಲ್ಲಿ ಸಿಕ್ಕಿದ ಕಸ್ಟಮರ್ ಕೇರ್‌ಗೆ ಕರೆ ಮಾಡಿದ್ದರು. ಹಣವನ್ನು ಹಿಂದಕ್ಕೆ ಪಡೆಯಲು 5 ಡಿಜಿಟ್‌ಗಳ ಸಂಖ್ಯೆಗಳ ಆ್ಯಪ್‌ನಲ್ಲಿ ನಮೂದಿಸುವಂತೆ ತಿಳಿಸಿದ್ದರು. ಅದರಂತೆ ನಂಬರ್ ನಮೂದಿ ಸಿದ ಬಳಿಕ ಇವರ ಖಾತೆಯಿಂದ 75,040ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.