Home Uncategorized ಕಾಂಗ್ರೆಸ್ ಗ್ಯಾರಂಟಿ ತಂದ ಸಂಕಷ್ಟ: ಟಿಕೆಟ್ ಖರೀದಿಸದೆ ತಲೆನೋವಾಗುತ್ತಿರುವ ಮಹಿಳಾ ಪ್ರಯಾಣಿಕರು; ಸಿಎಂಗೆ ಸಾರಿಗೆ ನಿಗಮಗಳಿಂದ...

ಕಾಂಗ್ರೆಸ್ ಗ್ಯಾರಂಟಿ ತಂದ ಸಂಕಷ್ಟ: ಟಿಕೆಟ್ ಖರೀದಿಸದೆ ತಲೆನೋವಾಗುತ್ತಿರುವ ಮಹಿಳಾ ಪ್ರಯಾಣಿಕರು; ಸಿಎಂಗೆ ಸಾರಿಗೆ ನಿಗಮಗಳಿಂದ ಪತ್ರ!

36
0

ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಘೋಷಣೆ ಮಾಡಿರುವ ಸರ್ಕಾರ, ಯೋಜನೆಯನ್ನು ಇನ್ನೂ ಜಾರಿಗೆ ತಂದಿಲ್ಲ. ಆದರೆ, ಮಹಿಳಾ ಪ್ರಯಾಣಿಕರು ಮಾತ್ರ ಸರ್ಕಾರ ಘೋಷಣೆ ಮಾಡಿದೆ, ನಾವು ಟಿಕೆಟ್ ಖರೀದಿಸುವುದಿಲ್ಲ ಎಂದು ಹೇಳುವ ಮೂಲಕ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸಾರಿಗೆ ನಿಗಮಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದ್ದಾರೆ. ಬೆಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಘೋಷಣೆ ಮಾಡಿರುವ ಸರ್ಕಾರ, ಯೋಜನೆಯನ್ನು ಇನ್ನೂ ಜಾರಿಗೆ ತಂದಿಲ್ಲ. ಆದರೆ, ಮಹಿಳಾ ಪ್ರಯಾಣಿಕರು ಮಾತ್ರ ಸರ್ಕಾರ ಘೋಷಣೆ ಮಾಡಿದೆ, ನಾವು ಟಿಕೆಟ್ ಖರೀದಿಸುವುದಿಲ್ಲ ಎಂದು ಹೇಳುವ ಮೂಲಕ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸಾರಿಗೆ ನಿಗಮಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದ್ದಾರೆ.

ಸರ್ಕಾರ ಘೋಷಣೆ ಮಾಡಿದೆ, ಟಿಕೆಟ್ ಖರೀದಿಸುವುದಿಲ್ಲ ಎಂದು ಹಲವು ಮಹಿಳೆಯರು ಬಸ್ ನಿರ್ವಾಹಕರೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದು, ಈ ವೇಳೆ ಮಹಿಳೆಯರಿಗೆ ಮನವರಿಕೆ ಮಾಡಿಕೊಡಲು ನಿರ್ವಾಹಕರು ಹರಸಾಹಸಪಡುತ್ತಿದ್ದಾರೆ. ಈ ಕುರಿತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಮಹಿಳಾ ಪ್ರಯಾಣಿಕರು ವಾಗ್ವಾದ ನಡೆಸುತ್ತಿರುವ ನಿದರ್ಶನಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಎಐಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿ ಮತ್ತು ಕಾರ್ಮಿಕರ ಫೆಡರೇಶನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಕೂಡಲೇ ಯೋಜನೆ ಜಾರಿಗೆ ತಂದು, ಮಹಿಳಾ ಪ್ರಯಾಣಿಕರಿಂದ ಕಂಡಕ್ಟರ್‌ಗಳಿಗೆ ಎದುರಾಗುತ್ತಿರುವ ಕಿರುಕುಳ ನಡೆಯಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

“ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಿಂದ ಪ್ರಭಾವಿತರಾದ ಜನರು 5 ವರ್ಷಗಳ ಕಾಲ ಸ್ಪಷ್ಟ ಬಹುಮತ ನೀಡಿದ್ದಾರೆ. ಯಾವುದೇ ಸರ್ಕಾರವು ತನ್ನ ಎಲ್ಲಾ ಭರವಸೆಗಳನ್ನು ತಕ್ಷಣವೇ ಜಾರಿಗೆ ತರುವುದು ಕಷ್ಟ ಎಂಬುದು ನಮಗೆ ತಿಳಿದಿದೆ. ಆದರೂ, ವಿಳಂಬ ಮಾಡದೆ ಕೆಲವು ಭರವಸೆಗಳ ಈಡೇರಿಸುವುದು ಅನಿವಾರ್ಯವಾಗಿದೆ. ರಾಜ್ಯಾದ್ಯಂತ ಅನೇಕ ಮಹಿಳಾ ಪ್ರಯಾಣಿಕರು ನಮ್ಮ ಬಸ್ ಕಂಡಕ್ಟರ್‌ಗಳೊಂದಿಗೆ ಮುಕ್ತವಾಗಿ ಪ್ರಯಾಣಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ವಾಗ್ವಾದಕ್ಕಿಳಿಯುತ್ತಿದ್ದಾರೆ. ಈ ಬಗ್ಗೆ ನಮಗೆ ದೂರುಗಳು ಬಂದಿವೆ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಡಿಎ ಅವರು ಮೇ 24 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here