Home Uncategorized ಕಾಂಗ್ರೆಸ್ ಪಕ್ಷದಿಂದ ವಿವಿಧ ರಾಜ್ಯಗಳಿಗೆ ಸಂವಹನ ಸಂಯೋಜನಕರ ನೇಮಕ

ಕಾಂಗ್ರೆಸ್ ಪಕ್ಷದಿಂದ ವಿವಿಧ ರಾಜ್ಯಗಳಿಗೆ ಸಂವಹನ ಸಂಯೋಜನಕರ ನೇಮಕ

9
0

ಹೊಸದಿಲ್ಲಿ : ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ವಿವಿಧ ರಾಜ್ಯಗಳಿಗೆ ಸಂವಹನ ಸಂಯೋಜನಕರನ್ನು ನೇಮಿಸಿ ಆದೇಶ ಹೊರಡಿಸಿದೆ. ಪ್ರೊ. ಗೌರವ್ ವಲ್ಲಭ್ ಅವರನ್ನು ಕರ್ನಾಟಕಕ್ಕೆ, ಲಾವಣ್ಯ ಬಲ್ಲಾಳ್ ಜೈನ್ ಅವರನ್ನು ಕೇರಳಕ್ಕೆ, ಭವ್ಯ ನರಸಿಂಹಮೂರ್ತಿ ಅವರನ್ನು ತಮಿಳುನಾಡು – ಪುದುಚೇರಿಗೆ ನೇಮಿಸಲಾಗಿದೆ.

ಈಶಾನ್ಯ ರಾಜ್ಯಗಳಿಗೆ ಮ್ಯಾಥ್ಯೂ ಆಂಟೋನಿ, ಅಸ್ಸಾಂಗೆ ಮಹಿಮಾ ಸಿಂಗ್, ಆಂಧ್ರ ಪ್ರದೇಶಕ್ಕೆ ಬಿ ಆರ್ ಅನಿಲ್ ಕುಮಾರ್, ಬಿಹಾರಕ್ಕೆ ಅಲೋಕ್ ಶರ್ಮಾ, ಛತ್ತೀಸ್ಗಡಕ್ಕೆ ರಾಧಿಕಾ ಶರ್ಮಾ ನೇಮಕೊಂಡಿದ್ದಾರೆ.

ಹರ್ಶದ್ ಶರ್ಮಾ ಗೋವಾಕ್ಕೆ, ಸಚಿನ್ ಸಾವಂತ್ ಗುಜರಾತ್ ಗೆ, ಅಮೃತ್ ಗಿಲ್ ಹಿಮಾಚಲಪ್ರದೇಶಕ್ಕೆ, ಜ್ಯೋತಿ ಕುಮಾರ್ ಸಿಂಗ್ ಜಾರ್ಖಂಡ್ ಗೆ, ಅರ್ಶದೀಪ್ ಖಡಿಯಾಳ್ ಜಮ್ಮುಗೆ, ಪರ್ವೀಝ್ ಆಲಂ ಕಾಶ್ಮೀರ ಮತ್ತು ಲಡಾಖ್ ಗೆ, ಚರಣ್ ಸಿಂಗ್ ಸಪ್ರ ಅವರನ್ನು ಮಧ್ಯಪ್ರದೇಶಕ್ಕೆ ನೇಮಿಸಲಾಗಿದೆ.

ಮಹಾರಾಷ್ಟ್ರಕ್ಕೆ ಸುರೇಂದ್ರ ಸಿಂಗ್ ರಜಪೂತ್, ಒಡಿಶಾಗೆ ಬೊಬಿತಾ ಶರ್ಮಾ, ಪಂಜಾಬ್ ಗೆ ಅನ್ಶುಲ್ ಅವಿಜಿತ್, ರಾಜಸ್ಥಾನಕ್ಕೆ ರಿತು ಚೌಧರಿ, ತೆಲಂಗಾಣಕ್ಕೆ ಸುಜಾತ ಪೌಲ್, ಉತ್ತರಾಖಂಡಕ್ಕೆ ಡಾ.ಚಯಾನಿಕಾ ಉನಿಯಾಲ್, ಉತ್ತರಪ್ರದೇಶಕ್ಕೆ ಅಭಯ್ ದುಬೆ, ಪಶ್ಚಿಮ ಬಂಗಾಳಕ್ಕೆ ಅನ್ಶುಮಾನ್ ಸೈಲ್ ಅವರನ್ನು ಸಂವಹನ ಸಂಯೋಜಕರನ್ನಾಗಿ ನೇಮಿಸಲಾಗಿದೆ.

LEAVE A REPLY

Please enter your comment!
Please enter your name here