Home Uncategorized ಕಾಂಗ್ರೆಸ್ ಮುಖಂಡ ಅಲ್ತಾಫ್ ಖಾನ್ ಹತ್ಯೆಗೆ ಸಂಚು?: ಮೂವರು ಯುವಕರ ಬಂಧನ

ಕಾಂಗ್ರೆಸ್ ಮುಖಂಡ ಅಲ್ತಾಫ್ ಖಾನ್ ಹತ್ಯೆಗೆ ಸಂಚು?: ಮೂವರು ಯುವಕರ ಬಂಧನ

19
0

ಕಾಂಗ್ರೆಸ್ ಮುಖಂಡ ಅಲ್ತಾಫ್‌ ಖಾನ್ ಹತ್ಯೆ ಮಾಡಲು ಸಂಚು ರೂಪಿಸಿದ್ದ ಮೂವರು ಯುವಕರನ್ನು ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ. ಬೆಂಗಳೂರು: ಕಾಂಗ್ರೆಸ್ ಮುಖಂಡ ಅಲ್ತಾಫ್‌ ಖಾನ್ ಹತ್ಯೆ ಮಾಡಲು ಸಂಚು ರೂಪಿಸಿದ್ದ ಮೂವರು ಯುವಕರನ್ನು ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

ಶನಿವಾರ ರಾತ್ರಿ 10 ಗಂಟೆಯ ವೇಳೆ ಗೋರಿಪಾಳ್ಯದಲ್ಲಿರುವ ಅಲ್ತಾಫ್‌ ಖಾನ್ ಮನೆ ಬಳಿ ಒಂದು ಆಟೋ ರಿಕ್ಷಾ ಬಂದು ನಿಂತಿದೆ. ಆಟೋ ರಿಕ್ಷಾದಲ್ಲಿದ್ದ ವ್ಯಕ್ತಿಗಳು ಬಹಳ ಹೊತ್ತು ಅಲ್ತಾಫ್‌ಗೆ ಕಾದಿದ್ದಾರೆ. ಆದರೆ, ಅಲ್ತಾಫ್ ಅವರು ಹೊರಗೆ ಬಾರದಿದ್ದಾಗ ಮನೆಯಿಂದ ಹೊರ ಬಾರದ ಕಾರಣ ಬಚಾವ್ ಆದ ಎಂದು ಗುಂಪು ಮಾತನಾಡಿಕೊಂಡು ಹಿಂತಿರುಗಿ ಹೋಗಲು ಮುಂದಾಗಿದ್ದಾರೆ.

ಈ ಮಾತುಗಳನ್ನು ಕೇಳಿಸಿಕೊಂಡ ಸ್ಥಳೀಯರು ಆಟೋವನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ತಮ್ಮನ್ನು ಹಿಂಬಾಲಿಸುವುದನ್ನು ನೋಡಿ ಗುಂಪಿನಲ್ಲಿದ್ದ ಓರ್ವ ಪರಾರಿಯಾಗಿದ್ದಾರೆ. ಬಳಿಕ ಯುವಕರು ಮೂವರನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ವೇಳೆ ಪೊಲೀಸರು ಆಟೋ ರಿಕ್ಷಾವನ್ನು ಪರಿಶೀಲಿಸಿದಾಗ ಆಟೋದಲ್ಲಿ ಮಾರಕಾಸ್ತ್ರ ಪತ್ತೆಯಾಗಿದೆ. ಜೆ.ಜೆ.ನಗರ ಪೊಲೀಸರು ಇದೀಗ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here