Home Uncategorized ಕಾಂಗ್ರೆಸ್ ಸೇರ್ಪಡೆಯಾದ ವೈ.ಎಸ್. ಶರ್ಮಿಳಾ

ಕಾಂಗ್ರೆಸ್ ಸೇರ್ಪಡೆಯಾದ ವೈ.ಎಸ್. ಶರ್ಮಿಳಾ

31
0

ಹೊಸದಿಲ್ಲಿ: ವೈಎಸ್ಆರ್ ತೆಲಂಗಾಣ ಪಕ್ಷದ ಸಂಸ್ಥಾಪಕಿ ವೈ.ಎಸ್. ಶರ್ಮಿಳಾ ಗುರುವಾರದಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. 

ವೈ.ಎಸ್.ಶರ್ಮಿಳಾರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಉಪಸ್ಥಿತರಿದ್ದರು.

ವೈ.ಎಸ್.ಶರ್ಮಿಳಾ ಅವರು ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿಯವರ ಪುತ್ರಿ ಹಾಗೂ ಆಂಧ‍್ರಪ್ರದೇಶದ ಹಾಲಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಕಿರಿಯ ಸಹೋದರಿ ಆಗಿದ್ದಾರೆ.

ಜನವಿರೋಧಿ ಹಾಗೂ ಭ್ರಷ್ಟ ಸರ್ಕಾರ ಎಂಬ ಆರೋಪಕ್ಕೆ ಗುರಿಯಾಗಿದ್ದ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ ಸರ್ಕಾರವನ್ನು ಕಿತ್ತೊಗೆಯಲು ಇತ್ತೀಚೆಗೆ ನಡೆದಿದ್ದ ತೆಲಂಗಾಣ ಚುನಾವಣೆಯಲ್ಲಿ ವೈ.ಎಸ್.ಶರ್ಮಿಳಾ ತಮ್ಮ ಬೆಂಬಲವನ್ನು ಕಾಂಗ್ರೆಸ್ ಪಕ್ಷಕ್ಕೆ ಘೋಷಿಸಿದ್ದರು.

LEAVE A REPLY

Please enter your comment!
Please enter your name here