ಸುರತ್ಕಲ್: ಕಾಟಿಪಳ್ಳ ಮಿಸ್ಬಾಹ್ ನಾಲೇಜ್ ಫೌಂಡೇಶನ್ ವತಿಯಿಂದ ಮಿಸ್ಬಾಹ್ ಮಾರ್ಡನ್ ಸ್ಕೂಲ್ನ ವಾರ್ಷಿ ಕೋತ್ಸವವು ಇತ್ತೀಚೆಗೆ ನಡೆಯಿತು.
ಹಾಜಿ ಮಮ್ತಾಝ್ ಅಲಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಅಕ್ಬರ್ ಸಲಮತ್ ಅಲಿ, ನಕೀಝ್ ಉಬೈದುಲ್ಲಾ, ಮುಹಮ್ಮದ್ ಹಶೀರ್, ಮುಹಮ್ಮದ್ ಸಾದಿಕ್, ಶವಾಝ್ ಭಾಗವಹಿಸಿದ್ದರು.
ಅಬ್ದುರ್ರಶೀದ್ ಝೈನಿ ಕಾಮಿಲ್ ಸ್ವಾಗತಿಸಿದರು. ಮಿಸ್ಬಾಹ್ ನಾಲೇಜ್ ಫೌಂಡೇಶನ್ನ ಟ್ರಸ್ಟಿ ಬಿ. ಫಕ್ರುದ್ದೀನ್, ಸಂಚಾಲಕ ಬಿ.ಎ. ನಝೀರ್, ಪ್ರಾಂಶುಪಾಲೆ ಝಾಹಿದಾ ಜಲೀಲ್ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕಿಯಾರಾದ ನೌಶೀನ್, ಶಕೀಲಾ ಕಾರ್ಯಕ್ರಮ ನಿರೂಪಿಸಿದರು. ಮಿಸ್ಬಾಹ್ ಮಾರ್ಡನ್ ಸ್ಕೂಲ್ನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.