ನವದೆಹಲಿ: ಕಾಡುಗೊಲ್ಲ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸುವಂತೆ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ (Poornima Srinivas) ಒತ್ತಾಯಿಸಿದ್ದಾರೆ. 2008ರಲ್ಲಿ ಮಾಜಿ ಸಿಎಂ ಯಡಿಯೂರಪ್ಪ (BS Yadiyurappa) ಕಮಿಟಿ ರಚನೆ ಮಾಡಿದ್ದರು. ಎಸ್ಟಿ ಮೀಸಲಾತಿ ನೀಡಲು ಕುಲಶಾಸ್ತ್ರ ಅಧ್ಯಯನ ಮಾಡಿಸಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲೂ ಇದನ್ನು ಕ್ಯಾಬಿನೆಟ್ನಲ್ಲಿ ಇಡಲಾಗಿತ್ತು. ಮತ್ತು ಕಾಡುಗೊಲ್ಲ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಅಗತ್ಯವಿದೆ ಎಂದು ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಕೆಲವು ಸಣ್ಣ ಗೊಂದಲಗಳಿಗೆ ಈಗಾಗಲೇ ಕೇಂದ್ರಕ್ಕೆ ಉತ್ತರಿಸಲಾಗಿದೆ. ಈಗಾಗಲೇ ತಳವಾರ, ಬೆಟ್ಟ ಕುರುಬ ಸಮುದಾಯವನ್ನು ಪರಿಗಣಿಸಿದೆ. ಅದೇ ಮಾದರಿಯಲ್ಲಿ ಕಾಡುಗೊಲ್ಲರಿಗೆ ಮೀಸಲಾತಿ ನೀಡಿ ಎಂದು ಆಗ್ರಹಿಸಿದ್ದಾರೆ.