ಬಂಟ್ವಾಳ, ಡಿ.27: ತಾಲೂಕಿನ ಕಾವಳಮೂಡೂರು ಗ್ರಾಮದ ಕಾವಳಕಟ್ಟೆಯ ದ.ಕ.ಜಿ.ಪಂ.ಉ.ಉರ್ದು ಹಿ.ಪ್ರಾ.ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ಇದೇ ವೇಳೆ ದಾನಿಗಳಿಂದ ನಿರ್ಮಿಸಲ್ಪಟ್ಟ ಕಂಪ್ಯೂಟರ್ ಕೊಠಡಿಗಳ ಉದ್ಘಾಟನೆಯನ್ನು ಮಾಜಿ ಸಚಿವ ರಮಾನಾಥ ರೈ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಹಮ್ಮದ್ ಹನೀಫ್ ಹಾಜಿ, ತನ್ವೀರ್ ಅಹ್ಮದ್ ಬಾಂಬಿಲ, ಇಸ್ಮಾಯಿಲ್ ಸಿದ್ದೀಕ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಅಲ್ ಹಾಜ್ ಮುಹಮ್ಮದ್ ಫಾಝಿಲ್ ರಝ್ವಿ, ಆದಂ ಮುಸ್ಲಿಯಾರ್, ಪದ್ಮಶೇಖರ್ ಜೈನ್, ಬೇಬಿ ಕುಂದರ್, ಸಫಾ ಸಲ್ಮಾ, ಕುಮಾರಿ ಜಯಂತಿ, ನಝೀರ್, ಅಶ್ರಫ್, ಖಲೀಲ್ ಅಹ್ಮದ್, ಶಿಕ್ಷಕರು, ಇತರ ಪ್ರಮುಖರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
