ಕೊಡಗಿನ ಜಲಾನಯನ ಪ್ರದೇಶಗಳಲ್ಲಿ ನೈಋತ್ಯ ಮುಂಗಾರು ಆಗಮನದ ವಿಳಂಬದಿಂದ ರಾಜ್ಯದ ದಕ್ಷಿಣ ಭಾಗಗಳಲ್ಲಿ ದೊಡ್ಡ ನೀರಿನ ಬಿಕ್ಕಟ್ಟ ಎದುರಾಗುವ ಸಾಧ್ಯತೆಯಿದೆ. ಮಡಿಕೇರಿ: ಕೊಡಗಿನ ಜಲಾನಯನ ಪ್ರದೇಶಗಳಲ್ಲಿ ನೈಋತ್ಯ ಮುಂಗಾರು ಆಗಮನದ ವಿಳಂಬದಿಂದ ರಾಜ್ಯದ ದಕ್ಷಿಣ ಭಾಗಗಳಲ್ಲಿ ದೊಡ್ಡ ನೀರಿನ ಬಿಕ್ಕಟ್ಟ ಎದುರಾಗುವ ಸಾಧ್ಯತೆಯಿದೆ.
ನದಿ ಜಲಾನಯನ ಪ್ರದೇಶಗಳು ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟ ಕ್ಷೀಣಿಸಿದ್ದು, ಕಾವೇರಿ ಜನ್ಮಸ್ಥಳವಾದ ಕೊಡಗು ಜಿಲ್ಲೆ ಕುಡಿಯುವ ನೀರಿನ ಕೊರತೆ ಎದುರಿಸುತ್ತಿದೆ. ಜಿಲ್ಲೆಯು ಮುಂಗಾರು ಆರಂಭದ ನಿರೀಕ್ಷೆಯಲ್ಲಿದ್ದರೂ ಹಲವಾರು ನಗರ ಸ್ಥಳೀಯ ಸಂಸ್ಥೆಗಳು ಮನೆಗಳಿಗೆ ನೀರು ಸರಬರಾಜು ಸೀಮಿತಗೊಳಿಸಿವೆ.
ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 3.45 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಭಾಗಮಂಡಲ ಮತ್ತು ತಲಕಾವೇರಿಯ ಜಲಾನಯನ ಪ್ರದೇಶಗಳಲ್ಲಿ ಇದುವರೆಗೆ ಜೂನ್‌ನಲ್ಲಿ ಯಾವುದೇ ಮಳೆಯಾಗದ ಕಾರಣ ಅಣೆಕಟ್ಟೆಗೆ ಒಳಹರಿವು ಕಡಿಮೆಯಾಗಿದೆ. ಕಳೆದ ವರ್ಷ ಜೂನ್ ನಲ್ಲಿ 403 ಕ್ಯೂಸೆಕ್ ಒಳಹರಿವು ಇದ್ದರೆ, ಈಗ 74 ಕ್ಯೂಸೆಕ್ ಮಾತ್ರ ಇದೆ.
ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ 5 ದಿನ ಭಾರಿ ಮಳೆ; ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಕಳೆದ ವರ್ಷವೂ ಮುಂಗಾರು ವಿಳಂಬವಾಗಿತ್ತು. ಆದರೆ ಮಾರ್ಚ್ ವರೆಗೆ ವರ್ಷವಿಡೀ ಹೇರಳವಾಗಿ ಮಳೆ ಸುರಿದು ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾಯಿತು. ಆದರೆ ಈ ವರ್ಷ, ಜಲಾನಯನ ಪ್ರದೇಶಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮಳೆಯಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದಲ್ಲಿ 3.45 ಟಿಎಂಸಿ ಅಡಿ ನೀರು ಕಡಿಮೆಯಾಗಿದೆ. ಒಂದು ವಾರದೊಳಗೆ ಮುಂಗಾರು ಆಗಮಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಜೂನ್ ಅಂತ್ಯದೊಳಗೆ ಮಳೆ ಬಾರದಿದ್ದರೆ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಹಾರಂಗಿ ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ ತಿಳಿಸಿದ್ದಾರೆ.
ನದಿಗೆ ನೀರು ಬಿಡದ ಕಾರಣ ಕುಶಾಲನಗರ ಬಳಿಯ ಚಿಕ್ಲಿಹೊಳೆ ಜಲಾಶಯ ಬರಿದಾಗಿದೆ. 0.18 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯವಿರುವ ಜಲಾಶಯ ಅರ್ಧದಷ್ಟು ಮಾತ್ರ ಭರ್ತಿಯಾಗಿದೆ. ಜೂನ್‌ನಲ್ಲಿ ನೀರಾವರಿ ಕಾಲುವೆಗಳಿಗೆ ನೀರು ಬಿಡಲಾಗುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಆದರೆ ವಿಶಿಷ್ಟವಾಗಿ ನಿರ್ಮಿಸಲಾದ ಈ ಜಲಾಶಯದಿಂದ ಹೊರಹರಿವು ತೀವ್ರವಾಗಿ ಕಡಿಮೆಯಾಗಿದೆ.
ಇದನ್ನೂ ಓದಿ: ಬಿಪರ್‌ಜಾಯ್ ಎಫೆಕ್ಟ್; ರಾಜ್ಯದಲ್ಲಿ ಶೇ 71ರಷ್ಟು ಮಳೆ ಕೊರತೆ, ಜೂನ್ 21ರಿಂದ ಎರಡು ವಾರ ಭಾರಿ ಮಳೆ ಸಾಧ್ಯತೆ!
ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ನೀರಿನ ಕೊರತೆ ಕಂಡು ಬರುತ್ತಿದೆ. ಕುಶಾಲನಗರದಲ್ಲಿ ಸ್ಥಳೀಯ ಸಂಸ್ಥೆಗಳು ಮೂರು ದಿನಕ್ಕೊಮ್ಮೆ ಎರಡರಿಂದ ಮೂರು ತಾಸು ಮನೆಗಳಿಗೆ ನೀರು ಪೂರೈಸುತ್ತಿವೆ. ಮುಂಗಾರು ಪೂರ್ವದ ಕಾರಣ ಕೃಷಿ ಭೂಮಿಗಳಿಗೆ ನೀರಾವರಿ ನಿಲ್ಲಿಸಿರುವುದರಿಂದ, ನದಿಗಳಲ್ಲಿ ಸಾಕಷ್ಟು ನೀರು ಇದೆ. ಆದರೆ ಮುಂದಿನ ದಿನಗಳಲ್ಲಿ ಸಂಪೂರ್ಣ ನೀರಿನ ಬಿಕ್ಕಟ್ಟು ಎದುರಾಗಬಾರದು ಎಂಬ ಕಾರಣಕ್ಕೆ ನಾವು ಮನೆಗಳಿಗೆ ನೀರು ಸರಬರಾಜು ನಿರ್ಬಂಧಿಸುತ್ತಿದ್ದೇವೆ ಎಂದು ಕುಶಾಲನಗರ ಕೆಯುಡಬ್ಲ್ಯುಎಸ್‌ಡಿಬಿಯ ಎಂಜಿನಿಯರ್ ಆನಂದ್ ತಿಳಿಸಿದ್ದಾರೆ.
ಮಳೆಯ ಅಭಾವದಿಂದ ದಕ್ಷಿಣ ಕೊಡಗಿನ ಹಲವೆಡೆ ರೈತರು ಬಿತ್ತಿದ ಭತ್ತ ಮೊಳಕೆಯೊಡೆದಿದ್ದು, ಹಕ್ಕಿಗಳು ಕಾಳುಗಳನ್ನು ತಿನ್ನುತ್ತಿವೆ. ಜಿಲ್ಲೆಯಲ್ಲಿ ಕಳೆದ ವರ್ಷ ಜೂನ್ 20 ರವರೆಗೆ 518.53 ಮಿಮೀ ಮತ್ತು 2021 ರಲ್ಲಿ ಇದೇ ಸಮಯದಲ್ಲಿ 908.24 ಮಿಮೀ ಮಳೆ ದಾಖಲಾಗಿದ್ದರೆ, ಈ ವರ್ಷ ಕೇವಲ 228.31 ಮಿಮೀ ಮಳೆ ದಾಖಲಾಗಿದೆ.