Home Uncategorized ಕಾವೇರಿ ನೀರಿಗಾಗಿ ಬೆಂಗಳೂರು ಬಂದ್: ಬಣಗುಡುತ್ತಿರುವ ರಸ್ತೆಗಳು, ವ್ಯಾಪಾರ- ವಹಿವಾಟು ಸ್ತಬ್ಧ!

ಕಾವೇರಿ ನೀರಿಗಾಗಿ ಬೆಂಗಳೂರು ಬಂದ್: ಬಣಗುಡುತ್ತಿರುವ ರಸ್ತೆಗಳು, ವ್ಯಾಪಾರ- ವಹಿವಾಟು ಸ್ತಬ್ಧ!

12
0

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಇಂದು ಬೆಂಗಳೂರು ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಳಗ್ಗೆ ಆರು ಗಂಟೆಯಿಂದಲೂ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ವ್ಯಾಪಾರ ವಹಿವಾಟು ಬಹುತೇಕ ಸ್ಥಗಿತಗೊಂಡಿದೆ. ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಇಂದು ಬೆಂಗಳೂರು ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಳಗ್ಗೆ ಆರು ಗಂಟೆಯಿಂದಲೂ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ವ್ಯಾಪಾರ ವಹಿವಾಟು ಬಹುತೇಕ ಸ್ಥಗಿತಗೊಂಡಿದೆ.

ಶಾಪಿಂಗ್ ಮಾಲ್ ಗಳು ಕ್ಲೋಸ್ ಆಗಿದ್ದು, ಅವುಗಳ ಮುಂದೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.ವಾಹನಗಳ ದಟ್ಟಣೆಯಿಂದ ತುಂಬಿರುತ್ತಿದ್ದ ರಸ್ತೆಗಳು ಬಣಗುಡುತ್ತಿವೆ, ಸದಾ ಗಿಜಿಗುಡುತ್ತಿದ್ದ ಏರಿಯಾಗಳು ಖಾಲಿ, ಖಾಲಿ ಹೊಡೆಯುತ್ತಿವೆ. 

ಇದನ್ನೂ ಓದಿ: ನಾಳೆ ಬಂದ್ ಹಿನ್ನೆಲೆ ಪದವಿ, ಸ್ನಾತಕೋತ್ತರ ಪರೀಕ್ಷೆ ಮುಂದೂಡಿದ ಕರ್ನಾಟಕ ರಾಜ್ಯ ಮುಕ್ತ ವಿವಿ, ಕಾನೂನು ವಿವಿ ಪರೀಕ್ಷೆಗಳೂ ಮುಂದೂಡಿಕೆ

ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳ ಸಂಚಾರವಿದ್ದರೂ ಪ್ರಯಾಣಿಕರಿಲ್ಲದೆ ಜನದಟ್ಟಣೆ ಪ್ರದೇಶಗಳಾದ ಮೆಜೆಸ್ಟಿಕ್, ಕೆ ಆರ್ ಮಾರ್ಕೆಟ್ ಮತ್ತಿತರ ಕಡೆಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ತೀರಾ ವಿರಳವಾಗಿದೆ. ಬಂದ್ ನಿಂದಾಗಿ ರಾಜ್ಯದಲ್ಲಿ ಜನದಟ್ಟಣೆಯ ಬಸ್ ನಿಲ್ದಾಣಗಳಲ್ಲಿ ಒಂದಾದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕಾಣುತ್ತಿಲ್ಲ ಎಂದು ಕಂಡಕ್ಟರೊಬ್ಬರು ಹೇಳಿದರು. 

#WATCH | Karnataka: Bengaluru Bandh has been called by various organizations regarding the Cauvery water issue. According to BMTC, all routes of Bengaluru Metropolitan Transport Corporation will be operational as usual.

(Visuals from Majestic BMTC Bus stop, Bengaluru) pic.twitter.com/fSZSeLyKMh
— ANI (@ANI) September 26, 2023

Karnataka | Manju, a bus conductor at Majestic BMTC Bus stop in Bengaluru says “As bandh has been called, no commuters are seen in Kempegowda bus stop which is usually one of the busiest bus stops in the state.” pic.twitter.com/ilssYrgt8i
— ANI (@ANI) September 26, 2023

 ಆಟೋ ಚಾಲಕ ನಾಸೀರ್ ಖಾನ್ ಮಾತನಾಡಿ,ಬಂದ್ ಗೆ ನಮ್ಮ ಬೆಂಬಲವಿದೆ. ಕಾವೇರಿ ವಿಚಾರ ಬಂದಾಗ ನಮ್ಮ ನಿಲುವು ಸ್ಪಷ್ಪವಾಗಿದೆ. ಕರ್ನಾಟಕ ಯಾರಿಗೂ ನೀರು ಒದಗಿಸುವುದಿಲ್ಲ, ಆಟೋಗಳು ಇಂದು ಕಾರ್ಯ ನಿರ್ವಹಿಸಲ್ಲ, ನಾವು ಬಂದ್ ಗೆ ಬೆಂಬಲ ನೀಡುತ್ತಿದ್ದೇವೆ ಎಂದರು. 

#WATCH | An auto driver at Majestic BMTC Bus stop, Bengaluru, Naseer Khan says “We support the bandh called by various organisations. When the Cauvery water issue comes, we have a very clear stand that Karnataka will not provide water to anyone. Only night drivers are here, autos… pic.twitter.com/jMeVz3GeB8
— ANI (@ANI) September 26, 2023

LEAVE A REPLY

Please enter your comment!
Please enter your name here