Home ಕರ್ನಾಟಕ ಕಿಂಗ್‌ಮೇಕರ್‌ ಆಗಲಿದ್ದಾರೆಯೇ ಚಂದ್ರಬಾಬು ನಾಯ್ಡು, ನಿತೀಶ್‌ ಕುಮಾರ್‌ ?

ಕಿಂಗ್‌ಮೇಕರ್‌ ಆಗಲಿದ್ದಾರೆಯೇ ಚಂದ್ರಬಾಬು ನಾಯ್ಡು, ನಿತೀಶ್‌ ಕುಮಾರ್‌ ?

8
0

ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿಯುತ್ತಿರುವ ನಡುವೆ ಪ್ರತಿ ಕ್ಷಣವೂ ಕುತೂಹಲ ಮೂಡಿಸುತ್ತಿದೆ, ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯದೇ ಇರುವ ಸಾಧ್ಯತೆ ಅಧಿಕವಾಗಿರುವ ಹಿನ್ನೆಲೆಯಲ್ಲಿ, ಬಿಜೆಪಿಯ ಮಿತ್ರ ಪಕ್ಷಗಳ ಪೈಕಿ ಯಾರು ಕಿಂಗ್‌ಮೇಕರ್‌ ಆಗಲಿದ್ದಾರೆಂಬ ಕುತೂಹಲ ಮೂಡಿದೆ.

ಪ್ರಸ್ತುತ 16 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಟಿಡಿಪಿ ಹಾಗೂ 15ರಲ್ಲಿ ಮುನ್ನಡೆ ಸಾಧಿಸಿರುವ ಜೆಡಿಯು ಗೆದ್ದರೆ ಎನ್‌ಡಿಎಗೆ 31 ಅಧಿಕ ಸ್ಥಾನಗಳು ಲಭಿಸುವಂತಾಗುತ್ತದೆ. ಬಿಜೆಪಿ ಬಹುಮತ ಪಡೆಯದೇ ಇದ್ದಲ್ಲಿ ಈ ಎರಡೂ ಪಕ್ಷಗಳ ಬೆಂಬಲ ಅದಕ್ಕೆ ಖಂಡಿತಾ ಬೇಕಾಗುವಂತಹ ಪರಿಸ್ಥಿತಿ ಇದೆ.

ನೂತನ ಸರ್ಕಾರದಲ್ಲಿ ಟಿಡಿಪಿ ಮತ್ತು ಜೆಡಿ(ಯು) ಪ್ರಮುಖ ಪಾತ್ರ ವಹಿಸಿದರೆ, ನರೇಂದ್ರ ಮೋದಿ ಅವರ ಸಂಭಾವ್ಯ ಮೂರನೇ ಅಧಿಕಾರಾವಧಿ ಸಾಕಷ್ಟು ದುರ್ಬಲವಾಗಿರಲಿದೆ. ಹಲವಾರು ಪ್ರಮುಖ ನೀತಿಗಳಿಗೆ ಸಂಬಂಧಿಸಿದಂತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಬಹುದು. ಅಷ್ಟೇ ಅಲ್ಲದೆ ಮೋದಿ ಆಡಳಿತದ ಹಲವು ಮಹತ್ವಾಕಾಂಕ್ಷೆಗಳಿಗೆ ಇದು ಅಡ್ಡಿಯಾಗಬಹುದು.

ಎಲ್ಲಾ ರಾಜಕೀಯ ಪಕ್ಷಗಳ ಕಾರ್ಯತಂತ್ರಗಳೂ ಮುಂದುವರಿಯುವ ಎಲ್ಲಾ ಸಾಧ್ಯತೆಗಳೂ ಇವೆ. ಬಹುಮತವಿಲ್ಲದೆ, ಮಿತ್ರ ಪಕ್ಷಗಳನ್ನು ಅವಲಂಬಿಸಬೇಕಾದ ಬಿಜೆಪಿ ಈ ವಾಸ್ತವತೆಗೆ ಹೊಂದಿಕೊಂಡು ಯಶಸ್ವಿ ಆಡಳಿತ ನೀಡಬಹುದೇ ಎಂಬ ಪ್ರಶ್ನೆಯೂ ಇದೆ.

LEAVE A REPLY

Please enter your comment!
Please enter your name here