ಉಳ್ಳಾಲ: ಉತ್ತಮ ಶಿಕ್ಷಣ ಪಡೆದು ಬಡತನ ದೂರ ಮಾಡಿ ನೆಮ್ಮದಿ ಜೀವನ ಸಾಗಿಸಬೇಕು. ಎಲ್ಲಾ ಗ್ರಾಮಗಳಿಗೂ ಅನುದಾನ ಮೀಸಲಿಡಲು ತೀರ್ಮಾನಿಸಲಾಗಿದೆ. ಕಿನ್ಯ ಗ್ರಾಮದ ಮೀನಾದಿ ಶಾಲೆ ಅಭಿವೃದ್ಧಿ ಆಗಬೇಕು ಎಂಬ ಗುರಿ ಇದೆ. ಶಾಲಾ ಕೊಠಡಿ ಗಳನ್ನು ಸುಸಜ್ಜಿತ ವಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದು ಸ್ಪೀಕರ್ ಯು ಟಿ ಖಾದರ್ ಹೇಳಿದರು
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿ, ಕಿನ್ಯ ಗ್ರಾಮದ ಮೀನಾದಿ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಇವುಗಳ ಆಶ್ರಯದಲ್ಲಿ ಅಮೃತ ಶಾಲಾ ಸೌಲಭ್ಯ ಯೋಜನೆಯಡಿ ನಿರ್ಮಾಣಗೊಂಡ ನೂತನ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ದಲ್ಲಿ ಕಿನ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ ಅವರು ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಕಿನ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಫಾರೂಕ್ , ಮಾಜಿ ಅಧ್ಯಕ್ಷ ಸಿರಾಜ್, ಪಿಡಿಒ ತುಳಸಿ, ಗುತ್ತಿಗೆದಾರರಾದ ಅಶ್ರಫ್, ಅಬ್ಬಾಸ್, ನಾರಾಯಣ ಕಜೆ, ಬಾಬು ಬಂಗೇರ, ಅಬೂಸಾಲಿ, ಮಾಜಿ ಸದಸ್ಯ ಮಹಮ್ಮದ್, ಗಿರಿಜಾ ಉಪಸ್ಥಿತರಿದ್ದರು.
ಶಿಕ್ಷಕಿ ಯಶೋಧ ಸ್ವಾಗತಿಸಿದರು.