ಪುತ್ತೂರು: ಸಮಾಜದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಉದಯವಾಗಲು ಬೇಕಾದ ಸಂಪನ್ಮೂಲಗಳನ್ನು ನಾವು ತಯಾರಿಗೊಳಿಸಬೇಕು. ಪ್ರತಿಭೆಗಳ ಪೋಷಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಬೇಕು ಎಂದು ಕುಂಬ್ರ ಮರ್ಕಝುಲ್ ಹುದಾ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಡಾ. ಎಂಎಸ್ ಎಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಹೇಳಿದರು.
ಅವರು ಕುಂಬ್ರದ ಮರ್ಕಝುಲ್ ಹುದಾ ಪದವಿಪೂರ್ವ ಕಾಲೇಜಿನ ವತಿಯಿಂದ ನಡೆದ ಟ್ಯಾಲೆಂಟ್ ಅವಾರ್ಡ್ ಸರ್ಮನಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮರ್ಪಕ ಸಂಪನ್ಮೂಲಗಳ ಮೂಲಕ ಉತ್ತಮ ತಲೆಮಾರನ್ನು ಬೆಳೆಸಿ ಸಮಗ್ರವಾದ ರಾಷ್ಟ ನಿರ್ಮಾಣಕ್ಕೆ ಮುಂದಾಗಬಹುದು. ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ಸೂಕ್ತ ಸಂಧರ್ಭಗಳಲ್ಲಿ ಒದಗಿಸಿ ಕೊಡುವ ಮೂಲಕ ಕ್ರಾಂತೀಯ ದಿಟ್ಟ ಹೆಜ್ಜೆಗಳನ್ನಿಡಬೇಕು. ಈ ದಿಸೆಯಲ್ಲಿ ಮರ್ಕಝುಲ್ ಹುದಾ ಸ್ತುತ್ಯಾರ್ಹ ಸೇವೆ ಸಲ್ಲಿಸುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪಾಣಾಜೆ ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಕುಕ್ಕುವಳ್ಲಿ ಮುಹಮ್ಮದ್ ಹಾಜಿ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಅತ್ಯಂತ ಹೆಚ್ಚಿನ ಪ್ರತಿಭಾವಂತೆ ವಿದ್ಯಾರ್ಥಿನಿಯರು ಹೊರಬರುತ್ತಿದ್ದು ಈ ಮೊದಲು ತಿಳಿದಿದ್ದರೂ ಇಂದು ಅದನ್ನು ಸ್ವತಹ ತಿಳಿಯಲು ಈ ವೇದಿಕೆ ಸಾಕ್ಷಿ ಆಗಿದ್ದು, ಗುಣಮಟ್ಟದ ವಿಧ್ಯೆಗೆ ಇಲ್ಲಿನ ಅಧ್ಯಾಪಿಕೆಯರು ನೀಡುತ್ತಿರುವ ಕಠಿಣ ಪರಿಶ್ರಮ ಮಾದರಿಯಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಎಂಎಚ್‍ಕೆ ಸೌದಿ ಅರೇಬಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೌಷಾದ್ ಪೋಳ್ಯ ಮರ್ಕಝುಲ್ ಹುದಾ ಒಮಾನ್ ಸಮಿತಿಯ ಆರ್ಗನೈಸರ್ ಉಬೈದುಲ್ಲಾಹ್ ಸಖಾಫಿ ಮಾತನಾಡಿದರು.
ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಬಶೀರ್ ಇಂದ್ರಾಹೆ, ಕೋಶಾಧಿಕಾರಿ ಯೂಸುಫ್ ಗೌಸಿಯಾ ಸಾಜ,ಹಸೈನಾರ್ ಅಮಾನಿ ಅಜ್ಜಾವರ , ಜಲೀಲ್ ಸಖಾಫಿ ಜಾಲ್ಸೂರು, ಯೂಸುಫ್ ಹಾಜಿ ಕೈಕಾರ,ಯೂಸುಪ್ ಮೈದಾನಿಮೂಲೆ, ಶಂಸುದ್ದೀನ್ ಬೈರಿಕಟ್ಟೆ,ಅನ್ವರ್ ಹುಸೇನ್ ಗೂಡಿನಬಳಿ,ಅಬ್ದುಲ್ ಹಮೀದ್ ಸುಳ್ಯ,ಪದವಿ ಪ್ರಾಂಶುಪಾಲ ಮನ್ಸೂರ್ ಕಡಬ, ಪದವಿಪೂರ್ವ ವಿಭಾಗದ ಪ್ರಾಂಶುಪಾಲ ಸಂಧ್ಯಾ ಪಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಶರೀಅತ್ ವಿಭಾಗದ ಪ್ರಾಂಶುಪಾಲ ವಳವೂರು ಮುಹಮ್ಮದ್ ಸಅದಿ ದುವಾ ನೆರವೇರಿಸಿದರು. 2022-23 ನೇ ಸಾಲಿನ ಎಪ್ಪತ್ತೊಂಬತ್ತು ಪ್ರತಿಭಾವಂತೆ ವಿದ್ಯಾರ್ಥಿನಿಯರಿಗೆ ಈ ಸಂದರ್ಭದಲ್ಲಿ ಟ್ಯಾಲೆಂಟ್ ಅವಾರ್ಡ್ ವಿತರಿಸಲಾಯಿತು.