ಕಿರುತೆರೆಯ ಸ್ಟಾರ್ ನಿರೂಪಕಿ ಅನುಶ್ರೀ (Anushree) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಮದುಮಗಳಂತೆ ಮಿಂಚಿರುವ ವಿಡಿಯೋವೊಂದನ್ನ ನಟಿ ಶೇರ್ ಮಾಡಿದ್ದಾರೆ.
ಕೆಂಪು ಬಣ್ಣದ ಲೆಹೆಂಗಾದಲ್ಲಿ ಅನುಶ್ರೀ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಚೆಂದದ ಆಭರಣ ಧರಿಸಿ ಕ್ಯಾಮೆರಾಗೆ ಮದುಮಗಳಂತೆ ಪೋಸ್ ನೀಡಿದ್ದಾರೆ. ವಿಡಿಯೋದಲ್ಲಿ ಅನುಶ್ರೀ ಲುಕ್ ನೋಡಿ ಅಭಿಮಾನಿಗಳು ಹಾಡಿ ಹೊಗಳಿದ್ದಾರೆ. ಮದುಮಗಳಂತೆ ಕಾಣುತ್ತಿದ್ದೀರಿ? ಮದುವೆ (Wedding) ಯಾವಾಗ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಈ ಹಿಂದೆ ಹಲವು ಬಾರಿ ಲೈವ್‌ಗೆ ಬಂದಾಗ ನಟಿಗೆ, ಮದುವೆಯ ಬಗ್ಗೆ ಫ್ಯಾನ್ಸ್ ಪ್ರಸ್ತಾಪ ಮಾಡಿದ್ದರು. ಸರಿಯಾದ ವ್ಯಕ್ತಿ, ಸಮಯ ಬಂದಾಗ ಮದುವೆಯಾಗುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದರು.
The post ಕೆಂಪು ಬಣ್ಣದ ಲೆಹೆಂಗಾದಲ್ಲಿ ಮದುಮಗಳಂತೆ ಕಾಣಿಸಿಕೊಂಡ ಅನುಶ್ರೀ! appeared first on Ain Live News.