ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -2ರಲ್ಲಿ ಬಿಎಂಪಿಟಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -2ರಲ್ಲಿ ಬಿಎಂಪಿಟಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ವಿಮಾನ ನಿಲ್ದಾಣ ತಲುಪಲು ಹಾಗೂ ಹಿಂತಿರುಗಲು ಬಿಎಂಟಿಸಿ ಬಸ್’ಗೆ ಬೇಡಿಕೆಗಳು ಹೆಚ್ಚಿದ್ದವು. ಈ ಹಿನ್ನೆಲೆಯಲ್ಲಿ ಟರ್ಮಿನಲ್-2ರಲ್ಲಿಯೂ ಇದೀಗ ಬಿಎಂಟಿಸಿ ಬಸ್ ಸೇವೆಯನ್ನು ಪ್ರಾರಂಭಿಸಲಾಗಿದೆ.
ಕಳೆದ 2 ತಿಂಗಳಿನಿಂದ ಟರ್ಮಿನಲ್ 2 ವರೆಗೆ ಪ್ರಾಯೋಗಿಕ ಆಧಾರದ ಮೇಲೆ ಬಸ್ ಗಳನ್ನು ಓಡಿಸಲಾಗುತ್ತಿತ್ತು. ಬೇಡಿಕೆಯ ಹೆಚ್ಚಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಟರ್ಮಿನಲ್ 2ನಲ್ಲಿ ಬಿಎಂಪಿಸಿ ಪೂರ್ಣ ಪ್ರಮಾಣದಲ್ಲಿ ಬಸ್ ಸೇವೆಗಳನ್ನು ಒದಗಿಸಲಿದೆ, ಬಸ್ ದರ ಇತರೆ ಯಾವುದೇ ಟರ್ಮಿನಲ್ ಗಳಲ್ಲಿರುವ ದರದಂತೆಯೇ ಇರಲಿದೆ ಎಂದು ಬಿಎಂಟಿಸಿ ಟ್ವಿಟರ್ ನಲ್ಲಿ ಹೇಳಿದೆ.
ಪ್ರತೀ ದಿನ ಸರಾಸರಿ 6,000-7,000 ಪ್ರಯಾಣಿಕರು ವಿಮಾನ ನಿಲ್ದಾಣದಿಂದ ನಗರದ ಕಡೆಗೆ ಪ್ರಯಾಣಿಸುತ್ತಾರೆ, ಅದೇ ರೀತಿ 5,000-6,000 ಜನರು ವಿರುದ್ಧ ದಿಕ್ಕಿನಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಾರೆ. “ನಾವು ಸದ್ಯಕ್ಕೆ ಟರ್ಮಿನಲ್ 2 ನಲ್ಲಿ ಎರಡು ವಿಭಿನ್ನ ವಿಧಾನಗಳ ಮೂಲಕ ಪ್ರಯಾಣಿಕರನ್ನು ಹೊತ್ತೊಯ್ಯಲಾಗುತ್ತಿದೆ. ಪ್ರಯಾಣಿಕರ ಹೊತ್ತೊಯ್ಯಲು ಪ್ರತ್ಯೇಕ ಶುಲ್ಕಗಳನ್ನು ಸಂಗ್ರಹಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
ಹೊಸ ಟರ್ಮಿನಲ್‌ನಲ್ಲಿ ಬಸ್ ನಿಲ್ದಾಣ ಲಭ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಟರ್ಮಿನಲ್ 2 ನಲ್ಲಿ ಬಸ್‌ಗಳ ನಿಲುಗಡೆಗೆ ಸ್ವಲ್ಪ ಜಾಗವನ್ನು ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ನಡುವೆ ಹೊಸ ಟರ್ಮಿನಲ್‌ಗೆ ಬಿಎಂಟಿಸಿ ಬಸ್ ಸೇವೆ ಆರಂಭಿಸಿರುವುನ್ನು ಪ್ರಯಾಣಿಕರು ಸ್ವಾಗತಿಸಿದ್ದಾರೆ.
ಕ್ಯಾಬ್‌ಗಳಿಗೆ ಹೋಲಿಸಿದರೆ, ಬಿಎಂಟಿಸಿಯ ವಾಯು ವಜ್ರ ಅಗ್ಗವಾಗಿದೆ. ಸಿರ್ಸಿ ಸರ್ಕಲ್‌ನಲ್ಲಿರುವ ನನ್ನ ಮನೆಯಿಂದ ವಿಮಾನ ನಿಲ್ದಾಣವನ್ನು ತಲುಪಲು ರೂ 1,000 ಪಾವತಿಸಬೇಕಾಗುತ್ತದೆ. ಕೆಲವೊಮ್ಮೆ ಬೇಡಿಕೆಗೆ ಅನುಗುಣವಾಗಿ ಅದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ನೀಡಬೇಕಾಗುತ್ತದೆ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.
ಟರ್ಮಿನಲ್ 1 ಮ್ತು ಟರ್ಮಿನಲ್ 2 ಎರಡಲ್ಲೂ ಬಿಎಂಟಿಸಿ ಕಾರ್ಯಾಚರಣೆ ಆರಂಭಿಸಿರುವುದು ಸಂತಸ ತಂದಿದೆ ಎಂದು ಪ್ರಯಾಣಿಗ ಅರ್ಜುನ್ ಬಿ ಅವರು ಹೇಳಿದ್ದಾರೆ.
ಇದೇ ವೇಳೆ ಬಿಎಂಟಿಸಿಗೆ ಸಲಹೆಯೊಂದನ್ನು ನೀಡಿರುವ ಅವರು, ಟರ್ಮಿನಲ್ 2 ರಿಂದ ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಪ್ರತ್ಯೇಕ ಬಸ್‌ಗಳನ್ನು ನಿರ್ವಹಿಸುವ ಬದಲು, ಬಸ್ ನಿಗಮವು ಟರ್ಮಿನಲ್ 2 ರಿಂದ ಟರ್ಮಿನಲ್ 1 ವರೆಗೆ ಶಟಲ್ ಸೇವೆಗಳನ್ನು ನಡೆಸಬಹುದು ಎಂದು ಹೇಳಿದ್ದಾರೆ.