Home Uncategorized ಕೆಎಂಎಫ್-ಅಮುಲ್ ವಿವಾದ ಜೀವಂತವಾಗಿರಿಸಿ ಸರ್ಕಾರದ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಮುಂದು!

ಕೆಎಂಎಫ್-ಅಮುಲ್ ವಿವಾದ ಜೀವಂತವಾಗಿರಿಸಿ ಸರ್ಕಾರದ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಮುಂದು!

12
0

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ 30 ದಿನಗಳು ಬಾಕಿಯಿದ್ದು, ಈ ನಡುವಲ್ಲೇ ಕೆಎಂಎಫ್-ಅಮುಲ್ ವಿವಾದ ಜೀವಂತವಾಗಿರಿ ಸರ್ಕಾರದ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಮುಂದಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ 30 ದಿನಗಳು ಬಾಕಿಯಿದ್ದು, ಈ ನಡುವಲ್ಲೇ ಕೆಎಂಎಫ್-ಅಮುಲ್ ವಿವಾದ ಜೀವಂತವಾಗಿರಿ ಸರ್ಕಾರದ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಮುಂದಾಗಿದೆ ಎಂದು ತಿಳಿದುಬಂದಿದೆ.

ಚುನಾವಣಾ ಪ್ರಚಾರದ ವೇಳೆ ಇದು ಪ್ರಮುಖ ವಿಷಯಗಳಲ್ಲಿ ಒಂದಾಗಿರಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಕೆಎಂಎಫ್ ಪ್ರತಿ ದಿನ 26 ಲಕ್ಷ ರೈತರಿಂದ 85 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತದೆ. ಈ ವಿಚಾರ 26  ಲಕ್ಷ ರೈತರಿಗೆ ಸಂಬಂಧಿಸಿದ್ದಾಗಿದ್ದು, ರೈತರ ಮೇಲೆ ಒತ್ತಡ ಹೇರುವಂತೆ ಹಿರಿಯ ನಾಯಕರು ಸೂಚಿಸಿದ್ದಾರೆಂದು ತಿಳಿಸಿದ್ದಾರೆ.

ನಡುವಲ್ಲೇ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಳೆದ ಕೆಲವು ವರ್ಷಗಳಿಂದ ರಾಜ್ಯದ ರೈತರ ಬೆನ್ನೆಲುಬಾಗಿರುವ ಸಂಸ್ಥೆಯನ್ನು ದುರ್ಬಲಗೊಳಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಯತ್ನ ನಡೆಸುತ್ತಿವೆ. 2020 ರಿಂದ ಈ ವಿಷಯವನ್ನು ಪ್ರಸ್ತಾಪಿಸುತ್ತಲೇ ಬಂದಿದ್ದೇವೆ. ನಮ್ಮ ನಾಯಕರು ರಾಜ್ಯ ಸರ್ಕಾರಕ್ಕೆ ಹಲವಾರು ಪತ್ರಗಳನ್ನುೋ ಬರೆದಿದ್ದಾರೆ. ವಿಧಾನಸಭೆಯಲ್ಲೂ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆಂದು ಹೇಳಿದ್ದಾರೆ.

2014ರಲ್ಲಿ ಕೆಎಂಎಫ್’ನ ಹಾಲಿನ ಸಂಗ್ರಹ 45 ಲಕ್ಷ ಲೀಟರ್ ಇತ್ತು. 2017ರ ಅಂತ್ಯಕ್ಕೆ ಈ ಸಂಗ್ರಹ 73 ಲಕ್ಷ ಲೀಟರ್’ಗೆ ಏರಿಕೆಯಾಗಿದೆ. ಸುಮಾರು 61 ಲಕ್ಷ ಲೀಟರ್ ಏರಿಕೆಯಾಗಿದ್ದ ಹಾಲಿನ ಸಂಗ್ರಹ ಇದೀಗ 71 ಲಕ್ಷ ಲೀಟರ್’ಗೆ ಇಳಿಕೆಯಾಗಿದೆ ಏಕೆ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸರಕಾರ ಪ್ರತಿ ಲೀಟರ್ ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು 5 ರೂ.ಗೆ ಹೆಚ್ಚಿಸಿತ್ತು, ಆದರೆ ಬಿಜೆಪಿ ಸರಕಾರ ಅದನ್ನು ಹೆಚ್ಚಿಸಲಿಲ್ಲ ಎಂದರು.

LEAVE A REPLY

Please enter your comment!
Please enter your name here